




ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಪ್ರಧಾನ ಕಚೇರಿಯ 11ನೇ ಬ್ರಹ್ಮಾವರ ಶಾಖೆಯು ಮಧುವನ್ ಕಾಂಪ್ಲೆಕ್ಸ್‌ನಲ್ಲಿ ನ.21ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು.
ಶಾಖೆಯು ಈ ಹಿಂದೆ ಬ್ರಹ್ಮಾವರದ ಹಳೆ ಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇನ್ನು ಮುಂದೆ ಬ್ರಹ್ಮಾವರ ಮುಖ್ಯ ರಸ್ತೆಯ ಸುಸಜ್ಜಿತ ಕಟ್ಟಡವಾದ ಮಧುವನ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸಲಿದೆ.


ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ ನಿರ್ದೇಶಕ ಎಂ. ಮಹೇಶ್ ಹೆಗ್ಡೆಯವರು ಕಚೇರಿ ಉದ್ಘಾಟಿಸಿ, ಸಂಘದ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಭಗೀರಥ.ಜಿ ವಹಿಸಿದ್ದರು. ಶ್ರೀ ನಾರಾಯಣ ಗುರು ಅರ್ಬನ್ ಕೋ-ಆಫ್ ಬ್ಯಾಂಕ್ ಅಧ್ಯಕ್ಷ ಹರೀಶ್ಚಂದ್ರ ಅಮೀನ್, ಶ್ರೀ ನಾರಾಯಣ ಗುರು ಕೋ-ಆಫ್ ಬ್ಯಾಂಕ್ ಉಪಾಧ್ಯಕ್ಷ ರಾಜು ಪೂಜಾರಿ, ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ ಶೆಟ್ಟಿ ಚಾಂತಾರು, ಕಟ್ಟಡ ಮಾಲಕರಾದ ಶ್ಯಾಮ ಪೂಜಾರಿ, ಉಮೇಶ ಎಂ. ಕೆ. ಕಲ್ಮಾಡಿ, ಕೈಲಾಶ್, ಲೆಕ್ಕಪರಿಶೋಧಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸಂಘದ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ ಅವರು ಸ್ವಾಗತಿಸಿದರು, ಮೋನಪ್ಪ ಪೂಜಾರಿ ಕಂಡೆತ್ಯರು ಪ್ರಸ್ತಾಪಿಸಿದರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಕುಮಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು, ಬಜಗೋಳಿ ಶಾಖಾ ವ್ಯವಸ್ಥಾಪಕರಾದ ಪ್ರವೀಣ ಪೂಜಾರಿ ಧನ್ಯವಾದ ಸಲ್ಲಿಸಿದರು. ಸಂಘದ ನಿರ್ದೇಶಕರಾದ ಸುಜಿತಾ ವಿ ಬಂಗೇರ, ಚಿದಾನಂದ ಪೂಜಾರಿ ಎಲ್ದಕ್ಕ, ಕೇಂದ್ರ ಕಚೇರಿ ಅಧಿಕಾರಿ ವರ್ಗ ಮತ್ತು ಇತರ ಶಾಖೆಗಳ ಶಾಖಾ ವ್ಯಸ್ಥಾಪಕರು, ಬ್ರಹ್ಮಾವರ ಶಾಖೆಯ ಪ್ರ.ಶಾಖಾ ವ್ಯವಸ್ಥಾಪಕರಾದ ಶರಾವತಿ, ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.









