




ಬೆಳ್ತಂಗಡಿ: ಡಿ.ಕೆ. ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ಪ್ರಾರ್ಥಿಸಿ ಕೇರಳದ ದೇವಸ್ಥಾನದಲ್ಲಿ ಅಳದಂಗಡಿಯ ಯುವಕ ನ.24ರಂದು ಪೂಜೆ ಸಲ್ಲಿಸಿದ್ದಾರೆ. ಕೇರಳದ ಮಡೆಕ್ಕಾವು ತಿರುವರ್ಕಾಡ್ ಭಗವತಿ. ದೇವಸ್ಥಾನದಲ್ಲಿ ಬೆಳ್ತಂಗಡಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಜ್ವಲ್ ಜೈನ್ ನಾವರ ವಿಶೇಷ ಪೂಜೆ ಸಲ್ಲಿಸಿದ್ದಾರೆ.



ಡಿ.ಕೆ. ಶಿವಕುಮಾರ್ ರವರ ಫೋಟೋ ಹಿಡಿದು ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದ್ದು, ಸುದ್ದಿ ಜೊತೆ ಮಾತನಾಡಿದ ಪ್ರಜ್ವಲ್ ” ನಾನು ಡಿ.ಕೆ. ಶಿವಕುಮಾರ್ ಅಭಿಮಾನಿಗಳು. ಅವರು ಸಿಎಂ ಆಗಬೇಕೆಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದೇನೆ” ಎಂದರು.









