




ಮಚ್ಚಿನ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಭೇಟಿ ನೀಡಿದರು. ನೂತನ ಕಟ್ಟಡ ವೀಕ್ಷಿಸಿದರು.


ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಉಪಾಧ್ಯಕ್ಷ ಶ್ರೀಧರ ಪೂಜಾರಿ ಕೆ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಕ್ಷಣ್, ನಿರ್ದೇಶಕರಾದ ಬೇಬಿ, ಸುಜಾತಾ ಪಿ. ಸಾಲಿಯನ್, ಜಯರಾಮ ಮಡಿವಾಳ, ಆನಂದ, ಉಮೇಶ್, ಗಣೇಶ್ ಅರ್ಕಜೆ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಪದ್ಮನಾಭ ಅರ್ಕಜೆ, ನಾರಾಯಣ ಶೆಟ್ಟಿ, ಹೇಮಂತ್ ಶೆಟ್ಟಿ, ಸಿಬ್ಬಂದಿಗಳಾದ ಏಕಲತ, ವನಿತ, ಸೌಜನ್ಯ ಗಣೇಶ್, ಯತೀಶ್, ಕಿಶೋರ್ ಅವರು ಉಪಸ್ಥಿತರಿದ್ದರು. ✍️ ಹರ್ಷ ಬಳ್ಳಮಂಜ









