





ಮಡಂತ್ಯಾರು: ಪುಂಜಾಲಕಟ್ಟೆ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ ನ. 19ರಂದು ಪೆರ್ಲ ಬೈಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 8ನೇ ತರಗತಿಯ ಅಧೀಕ್ಷ, ಸಹಿಷ್ಣು ವರ್ಣ ಮತ್ತು 9ನೇ ತರಗತಿಯ ಲಾಸ್ಯ, ಅದಮ್ಯ ಮಡವು, ಮನ್ವಿತಾ ನಾಯಕ್, ದ್ವಿತಿ, ಚರಿತ್ ಹಾಗೂ 10ನೇ ತರಗತಿಯ ಅದ್ವಿತ ಶೆಟ್ಟಿ, ಅಲೀನಾ ಅನಿಶ್, ಸುಭಿಕ್ಷಾ ವಿ. ಬಂಗೇರ, ಪಿ.ಎಚ್. ಬಿಂದು, ಯಶ್ಮಿ, ಕೆ. ಶ್ರಾವಣಿ ಬಾಳಿಗ, ಪ್ರಾಪ್ತಿ ಎಲ್., ಆಲ್ರಾನ್ ಫೆರ್ನಾಂಡಿಸ್, ಅನಿರುದ್ ಅವರು ಪ್ರಥಮ ಸ್ಥಾನವನ್ನು ಹಾಗೂ 8ನೇ ತರಗತಿಯ ಗ್ಲ್ಯಾನ್ಸನ್ ವೇಗಸ್ ಮತ್ತು 9ನೇ ತರಗತಿಯ ರೀತಿಕ ಶೆಣೈ ಅವರು ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 8ನೇ ತರಗತಿಯ ಸೃಷ್ಟಿ ಮತ್ತು 9ನೇ ತರಗತಿಯ ಅದಿತಿ ವೈ ಕುಲಾಲ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಅವರಿಗೆ ಶಾಲಾ ಶಿಕ್ಷಕ ವೃಂದದವರು ತರಬೇತಿಯನ್ನು ನೀಡಿರುತ್ತಾರೆ.









