


ಬೆಳ್ತಂಗಡಿ: ಕಾರಿಂಜ ಸ. ಕಿ. ಪ್ರಾ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಪೋಷಕ-ಶಿಕ್ಷಕರ ಸಭೆಯನ್ನು ಶಾಲಾ ಅಧ್ಯಕ್ಷ ಜಗನ್ನಾಥ ರೈ. ಅವರ ಉಪಸ್ಥಿತಿಯಲ್ಲಿ ನ.14ರಂದು ಬಹಳ ಅದ್ದೂರಿಯಾಗಿ ನಡೆಸಲಾಯಿತು. ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಆಟೋಟ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾಡಲಾಯಿತು. ಶಾಲೆಯ ದಾನಿಯಾದ ವಿನಯಕುಮಾರ್ ಅವರನ್ನು ಶಾಲೆಯಿಂದ ಗೌರವಿಸಲಾಯಿತು. ಮಕ್ಕಳ ಹಕ್ಕುಗಳು, ಅದರ ರಕ್ಷಣೆ ಬಗ್ಗೆ ಮಾಹಿತಿ ನೀಡಲಾಯಿತು.



ನಿವೃತ್ತ ಯೋಧ ಜೆ.ಕೆ ಪೂಜಾರಿ ಇಳಂತಿಲ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾ ಉಪಾಧ್ಯಕ್ಷ ನುಸೈಬ, ಮಾಜಿ ಅಧ್ಯಕ್ಷ ಓಬಯ್ಯ ಪೂಜಾರಿ ಕಾರಿಂಜ, ಅಂಗನವಾಡಿ ಕಾರ್ಯಕರ್ತೆ ಶಶಿಪ್ರಭಾ, ಮಕ್ಕಳ ಪೋಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು. ಮುಖ್ಯಗುರು ಗಿರಿಜಾ ಎನ್. ಸ್ವಾಗತಿಸಿ, ಕಾರ್ಯಕ್ರಮವನ್ನು ಸಹಶಿಕ್ಷಕ ಪರಮೇಶ್ವರ ಎಸ್. ನಿರೂಪಿಸಿದರು.









