




ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕದ ದೇವಸ್ಥಾನದಲ್ಲಿ ದಿನಗೂಲಿ ನೌಕರರಾಗಿ ದುಡಿಯುತ್ತಿರುವ ಸುಜಾತಾ ಅವರ ಪತಿ ಬಾಲಕೃಷ್ಣ ಶೆಟ್ಟಿ ಅವರು ಇತ್ತೀಚೆಗೆ ಆನೆ ದಾಳಿ ಸಂದರ್ಭ ಮೃತ ಪಟ್ಟಿದ್ದರು. ರಾಜ್ಯ ಕೆ.ಪಿ.ಸಿ.ಸಿ.ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬಾಲಕೃಷ್ಣ ಶೆಟ್ಟಿ ಮನೆಗೆ ಬೇಟಿ ನೀಡಿದ್ದರು. ಮನೆಯವರು ಮತ್ತು ಗ್ರಾಮಸ್ಥರು ಮೃತ ಬಾಲಕೃಷ್ಣ ಶೆಟ್ರ ಪುತ್ರಿ ಕುಮಾರಿ ವೇದಿತಳಿಗೆ, ಉದ್ಯೋಗ ಕೊಡಿಸಬೇಕೆಂದು ವಿನಂತಿಸಿದ್ದರು. ಮನವಿಗೆ ಸ್ಪಂದಿಸಿದ ರಕ್ಷಿತ್ ಶಿವರಾಂ ಅವರು ಬೆಂಗಳೂರಿನ ಪ್ರಸಿದ್ಧ ಐಟಿ ಕಂಪನಿಯಲ್ಲಿ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ. ನ.17ರಂದು ವೇದಿತ ಅವರು ಐಟಿ ಉದ್ಯೋಗಿಯಾಗಿ ಕೆಲಸ ಸೇರುವಂತೆ ಸಂಸ್ಥೆಯು ಆದೇಶ ನೀಡಿರುತ್ತದೆ. ಅಲ್ಲದೆ ಅರಣ್ಯ ಇಲಾಖೆಯಿಂದ ಪರಿಹಾರವಾಗಿ ರೂ. 20ಲಕ್ಷ ಮಂಜೂರಾತಿಗೊಳಿಸುವಲ್ಲಿಯೂ ಸಕ್ರಿಯ ಪಾತ್ರ ವಹಿಸಿ, ಪರಿಹಾರ ಒದಗಿಸುವಲ್ಲಿ ರಕ್ಷಿತ್ ಶಿವರಾಂ ಪ್ರಮುಖ ಪಾತ್ರ ವಹಿಸಿದ್ದರು. ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯು ರಕ್ಷಿತ್ ಶಿವರಾಂ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.









