ಎರುಕಡಪ್ಪು: ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

0

ಮಡಂತ್ಯಾರು: ಕಳಿಯ ಗ್ರಾಮದ ಎರುಕಡಪ್ಪು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ನ.14 ರಂದು ನಡೆಯಿತು. ಕಳಿಯ ಗ್ರಾಮ ಪಂಚಾಯತ್ ಸದಸ್ಯೆ ಮರೀಟಾ ಪಿಂಟೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ಛದ್ಮವೇಷ, ಆಟೋಟ ಸ್ಪರ್ಧೆ ಮತ್ತು ಮಕ್ಕಳ ಪೋಷಕರಿಗೆ ವಿವಿಧ ರೀತಿಯ ಅಟೋಟ ಸ್ಪರ್ಧೆ ನಡೆಯಿತು. ಹಾಗೂ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.
ಬಾಲವಿಕಾಸ ಸಮಿತಿ ಅಧ್ಯಕ್ಷ ನೀತಾ ಕುಮಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕೊಡುಗೆ: ಮಕ್ಕಳ ಪೋಷಕರಾದ ನಜೀರ್ ಹುಸೈನ್ ಸೌಂಡ್ ಬಾಕ್ಸ್ ಮತ್ತು ಮೈಕ್ ನೀಡಿದರು. ಮಹಮ್ಮದ್ (ಮೋನು) ಗೋಡೆ ಗಡಿಯಾರ, ಹಸನಬ್ಬ ಪೇರಾಜೆ ಕುಕ್ಕರ್ ನೀಡಿ ಸಹಕರಿಸಿದರು.
ಅಂಚೆ ಇಲಾಖೆ ನಿವೃತ್ತ ಡಾಕಯ್ಯ ಗೌಡ ಹೀರ್ಯ ಅವರನ್ನು ಸನ್ಮಾನಿಸಿ, ಗೌರವಿಸಿದರು. ಆಶಾ ಕಾರ್ಯಕರ್ತೆ ಸುಭಾಷಿಣಿ ಕೆ., ಸಹಾಯಕಿ ಗೀತಾ ಹಾಗೂ ಮಕ್ಕಳ ಪೋಷಕರು ಮತ್ತಿತರರು ಉಪಸ್ಥಿತರಿದ್ದರು. ಅಂಗನವಾಡಿ ಕೇಂದ್ರ ಕಾರ್ಯಕರ್ತೆ ಗುಣವತಿ ಕೆ.ಎನ್. ಸ್ವಾಗತಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here