


ಗುರಿಪಳ್ಳ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಮತ್ತು ಶಿಕ್ಷಕರ ಮಹಾಸಭೆ ನ. 14 ಮಕ್ಕಳ ದಿನಾಚರಣೆಯಂದು ಜರುಗಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಪಾಂಡುರಂಗ ಮರಾಠೆ ಗೌರವಾಧ್ಯಕ್ಷ ರಮಾನಂದ ಶರ್ಮಾ ಶಾಲಾಭಿವೃದ್ಧಿ ಅಧ್ಯಕ್ಷೆ ಸಾಂಬಾ ಹಾಗೂ ಪೋಷಕರು ಹಾಜರಿದ್ದರು.


ಶಾಲೆಯ ಉಳಿವಿಗಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೆಚ್ಚು ದಾಖಲಾತಿ ಆಗುವರೆಗೆ ಮನೆ ಮನೆ ಭೇಟಿ ಪೋಷಕರ ಮನವೊಲಿಸಲು ಅಧ್ಯಕ್ಷರು ಸಲಹೆ ನೀಡಿದರು.

ಮುಖ್ಯ ಶಿಕ್ಷಕ ಸುರೇಶ್ ಅವರು ಶಾಲೆಯ ಸರ್ವತೋಮುಖ
ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳು ಪೋಷಕರು ಕೈಜೋಡಿಸಬೇಕೆಂದು ವಿನಂತಿಸಿದರು. ಹಳೆ ವಿದ್ಯಾರ್ಥಿಗಳಾದ ಸಂತೋಷ ಗೌಡ, ಭರತ್ ಪೂಜಾರಿ ಮಕ್ಕಳಿಗೆ ನೋಟು ಪುಸ್ತಕ ನೀಡಿದರು. ಮತ್ತು ಸಿಹಿ ತಿಂಡಿ ವಿತರಿಸಿ, ಶಾಲಾ ಶಿಕ್ಷಕಿ ಸ್ಪೂರ್ತಿ ಧನ್ಯವಾದ ಅರ್ಪಿಸಿದರು.









