ಉಜಿರೆ: ಜನರ ದುಡ್ಡು ಲೂಟಿ ಮಾಡುವ ಬದಲು ಸರ್ಕಾರ ತಟ್ಟೆ ಹಿಡಿದು ಭಿಕ್ಷೆ ಬೇಡಬಹುದು: ಶಾಸಕ ಹರೀಶ್ ಪೂಂಜ-ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ತಾಲೂಕಿಗೆ ಉಪವಿಭಾಗ ಎಂದು ಡಿ.ವೈ.ಎಸ್.ಪಿ. ಸಬ್ ಡಿವಿಷನ್ ಕಾಂಗ್ರೆಸ್ ಸರ್ಕಾರ ಮಾಡಿದೆ. ಇದರಿಂದ ಸಾಮಾನ್ಯ ಜನರಿಗೆ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ. ಕಾಂಗ್ರೆಸ್ ಸರಕಾರ ಜನಪ್ರತಿನಿಧಿಗಳು, ಜನಸಾಮಾನ್ಯರ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಮಾಡಿರುವುದನ್ನು ನಾನು ಶಾಸಕನಾಗಿ ಖಂಡಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೆ ರಸ್ತೆ ಕಾಮಗಾರಿ ಸರಿಯಾಗಿ ನಡೆಸದಿದ್ದಲ್ಲಿ ನಾಗರಿಕರು ಎಚ್ಚೆತ್ತು ಸಂಬಂಧಪಟ್ಟವರ ಅಥವಾ ನನ್ನ ಗಮನಕ್ಕೆ ತನ್ನಿ ಎಂದರು.

ಉಜಿರೆ-ಪೆರಿಯಶಾಂತಿ ಸ್ಪರ್ ರಸ್ತೆಗೆ 616 ಕೋ.ರೂ. ಅನುದಾನ ಬಂದಿದೆ. ಸಂಸದರ ನೇತೃತ್ವದಲ್ಲಿ ಹತ್ತು ದಿನಗಳಲ್ಲಿ ಶಿಲಾನ್ಯಾಸ ನೆರವೇರಲಿದೆ. ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ವೇಗವಾಗಿ ನೆರವೇರುತ್ತಿದೆ ಎಂದರು. ಕಳೆಂಜದಲ್ಲಿ ಈ ಹಿಂದೆ 309 ಸರ್ವೇ ಸಂಖ್ಯೆಯನ್ನು ಕಂದಾಯ ಅರಣ್ಯ ಇಲಾಖೆ, ಗ್ರಾಮಸ್ಥರು ಹಾಗೂ ಖಾಸಗಿ ಸರ್ವೇದಾರರ ಮೂಲಕ ಶೀಘ್ರವೇ ಸರ್ವೇ ಕಾರ್ಯ ನಡೆಯಲಿದೆ, ಮತ್ತು ಸರಕಾರ ನನಗೆ ನೀಡಿರುವ 12 ಕೋ.ರೂ. ಎಸ್‌.ಎಚ್.ಡಿ.ಪಿ. ಅನುದಾನವನ್ನು ಉಪ್ಪಿನಂಗಡಿ ರಸ್ತೆಗೆ ಮೀಸಲಿರಿಸಿದ್ದೇನೆ. ಸರಕಾರ ಟೆಂಡ‌ರ್ ಕರೆದಾಗ ರಸ್ತೆ ಸರಿಪಡಿಸುವ ಭರವಸೆ ನೀಡುತ್ತೇನೆ. ಬೆಳ್ತಂಗಡಿ ಪ.ಪಂ. ಸಂಬಂಧಿಸಿದಂತೆ ಡಾ.ವೀರೇಂದ್ರ ಹೆಗ್ಗಡೆಯವರು ರಾಜ್ಯಸಭಾ ನಿಧಿಯಿಂದ 2 ಕೋ.ರೂ. ಅನುದಾನವನ್ನು ಹುಣೆಕಟ್ಟೆ ಮಲ್ಲೊಟ್ಟು ರಸ್ತೆಗೆ ನೀಡಿದ್ದಾರೆ. ಈ ಮೂಲಕ ಅಭಿವೃದ್ಧಿ ನಡೆಸಲಾಗುವುದು, ಇನ್ನು ದೆಹಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತೇನೆ. ಕೇಂದ್ರ ಸರಕಾರ ಹಾಗೂ ದೆಹಲಿ ಸರಕಾರ ಸೇರಿ ಭಯೋತ್ಪಾದಕ ಚಟುವಟಿಕೆಯಲ್ಲಿರುವವರನ್ನು ತಕ್ಷಣ ಬಂಧಿಸುವ ಕೆಲಸ ಮಾಡಿದೆ,
ಬೆಳ್ತಂಗಡಿ ತಾಲೂಕಿನಲ್ಲಿ ಅರಣ್ಯ ಇಲಾಖೆಯ ದೌರ್ಜನ್ಯ ಮತ್ತೆ ಹೆಚ್ಚಾಗಿದೆ. ಮಲವಂತಿಗೆ, ಶಿಬಾಜೆಯಲ್ಲಿ ಕೃಷಿಕರ ಕೃಷಿ ನಾಶ ಮಾಡಿ ಒಕ್ಕಲೆಬ್ಬಿಸುವ ಕೆಲಸ ಮಾಡಿಸಿದೆ ಎಂದರು.

ಕಾಂಗ್ರೆಸ್‌ ಸರಕಾರ ದಿವಾಳಿಯಾಗಿ ಪೊಲೀಸರ ಮೂಲಕ ಜನಸಾಮಾನ್ಯರ ದೋಚುವ ಬದಲಾಗಿ, ತಟ್ಟೆ ಹಿಡಿದು ಭಿಕ್ಷೆ ಬೇಡಬಹುದಲ್ಲವೇ. ಈ ಮೂಲಕ ಬೆಳ್ತಂಗಡಿಯಲ್ಲಿ ಜನಸಾಮಾನ್ಯರ ಪರ ಇರುವ ಕಾಂಗ್ರೆಸ್ ಪಕ್ಷದ ಮುಖಂಡರು ಹಿಂಪಡೆಯುವ ಕೆಲಸ ಮಾಡಬೇಕು. ಬೆಳ್ತಂಗಡಿಯನ್ನೇ ಕೇಂದ್ರವಾಗಿಸಿ ನಡೆಸುತ್ತಿರುವ ನಡೆಯ ಬಗ್ಗೆ ಸರಕಾರಕ್ಕೆ ನಾನು ವೈಯಕ್ತಿಕವಾಗಿ ಮನವಿ ಮಾಡುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್‌ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾ ಕಾರಂತ್, ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಪ.ಪಂ. ಅಧ್ಯಕ್ಷ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here