


ನಾರಾವಿ: ಸಂತ ಅಂತೋನಿ ಪದವಿ ಕಾಲೇಜು ಹಾಗೂ ಪದವಿಪೂರ್ವ ಕಾಲೇಜು ಸೇರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಶೈಕ್ಷಣಿಕ ತರಬೇತಿ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಸಂಭ್ರಮ 2025 ಕಾಲೇಜು ಸಭಾಂಗದಲ್ಲಿ ವಿಜೃಂಭಣೆಯಿಂದ ನಡೆಯಿತು. ಮಂಗಳೂರು ಪದುವಾ ಕಾಲೇಜು ಆಫ್ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲ ಸ್ವಾಮಿ ಅರುಣ್ ವಿಲ್ಸನ್ ಲೋಬೋ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಖ್ಯಾತ ರಂಗ ಭೂಮಿ ಹಾಗೂ ಚಲನಚಿತ್ರ ನಟ ರವಿ ರಾಮಕುಂಜ ಹಾಗೂ ಖ್ಯಾತ ಟಿವಿ ನಿರೂಪಕಿ ಕೀರ್ತಿ ಎಸ್. ಅವರು ಆಗಮಿಸಿದ್ದರು. ಸಂತ ಅಂತೋನಿ ಶಿಕ್ಷಣ ಸಂಸ್ಥಗಳ ಸಂಚಾಲಕ ಸ್ವಾಮಿ ಜೆರೋಮ್ ಡಿ ಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಾರಾವಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್ ಮೀರಾoದ, ಕಾರ್ಯದರ್ಶಿ ಎವ್ಜಿನ್ ರೋಡ್ರಿಗಸ್, ನಾರಾವಿ ಗ್ರಾಮ ಪಂಚಾಯತ್ ಸದಸ್ಯೆ ಡೈನಾ ರೋಡ್ರಿಗಸ್, ನಾರಾವಿ ಪ್ರೌಢ ಶಾಲೆ ನಾರಾವಿಯ ಮುಖ್ಯ ಅಧ್ಯಾಪಕ ಗೋಪಾಲಕೃಷ್ಣ ತುಳುಪುಳೆ, ಸಂತ ಪಾವ್ಲರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಅಧ್ಯಾಪಕಿ ಸೋಫಿಯಾ ಫೆರ್ನಾಂಡಿಸ್, ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯ ಅಧ್ಯಾಪಕ ರಿಚರ್ಡ್ ಮೋರಸ್, ಸಂಭ್ರಮ 2025 ಕಾರ್ಯಕ್ರಮದ ಆಯೋಜಕರಾದ ಅವಿಲ್ ಮೋರಸ್, ದಿನೇಶ್ ಬಿ.ಕೆ. ಉಪಸ್ಥಿತರಿದ್ದರು.


ಮಡoತ್ಯಾರು ಸೆಕ್ರೆಟ್ ಹಾರ್ಟ್ ಕಾಲೇಜಿನ ಉಪನ್ಯಾಸಕ ಅವಿನಾಶ್ ಲೋಬೋ, ಕಾರ್ಯಕ್ರಮ ನಿರೂಪಕ ಶ್ರೀ ಜೋವೆಲ್ ಫೆರ್ನಾಂಡಿಸ್ ಹಾಗೂ ಕೀರ್ತಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ನಡೆದ ವಿವಿಧ ಸ್ಪರ್ಧೆಗಳಲ್ಲಿ ಸಂತ ಪಾವ್ಲರ ಆಂಗ್ಲ ಮಾಧ್ಯಮ ಶಾಲೆ ನಾರಾವಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು, ಅಳದಂಗಡಿ ಸಂತ ಪೀಟರ್ ಕ್ಲೇವರ್ ಚರ್ಚ್ ಶಾಲೆ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆಯಿತು.
ಪ್ರಾಂಶುಪಾಲ ಸಂತೋಷ್ ಸಲ್ದಾನಾ ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ರವಿ ರಾಮಕುಂಜ ಹಾಗೂ ಕೀರ್ತಿ ಎಸ್. ಅವರನ್ನು ಸನ್ಮಾನಿಸಲಾಯಿತು.ದೈಹಿಕ ಶಿಕ್ಷಣ ನಿರ್ದೇಶಕ ಪ್ರದೀಪ್ ಬಿ. ಕಾರ್ಯಕ್ರಮ ನಿರೂಪಿಸಿದರು. ಹಿಂದಿ ಉಪನ್ಯಾಸಕಿ ಆಶಾ ಧನ್ಯವಾದವಿತ್ತರು.









