ಪ್ರಶಾಂತ್ ಲಾಯಿಲ ಅವರಿಗೆ ಜೆಸಿಐ ಭಾರತದ ವಲಯ 15ರ ಅತ್ಯುನ್ನತ “ಕಮಲಪತ್ರ ಪ್ರಶಸ್ತಿ”

0

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿಯ ಪೂರ್ವಾಧ್ಯಕ್ಷ ಜೇಸಿ ಪ್ರಶಾಂತ್ ಲಾಯಿಲ ಅವರ ಜೇಸಿ ಮತ್ತು ಜೇಸಿಯೇತರ ಸೇವೆಗಳನ್ನು ಪರಿಗಣಿಸಿ ಜೆಸಿಐ ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ “ಕಮಲ ಪತ್ರ” ಪ್ರಶಸ್ತಿಯನ್ನು ಜೆಸಿಐ ವಲಯ 15ರ ವಲಯ ಸಮ್ಮೇಳನದಲ್ಲಿ ಪದ್ಮಶ್ರೀ ಮಂಜಮ್ಮ ಜೋಗತಿ, ಸಮ್ಮೇಳನದ ಸಭಾಧ್ಯಕ್ಷ, ವಲಯ 15 ರ ವಲಯಾಧ್ಯಕ್ಷ ಜೆಸಿಐ ‌ಸೆನೆಟರ್ ಅಬಿಲಾಷ್ ಬಿಎ ಹಾಗೂ ಇತರೆ ಗಣ್ಯರ ಸಮಕ್ಷಮದಲ್ಲಿ ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಅಶೋಕ್ ಭಟ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಪ್ರಶಾಂತ್ ಲಾಯಿಲ ಅವರು 2012ರಲ್ಲಿ ಜೆಸಿಐ ಬೆಳ್ತಂಗಡಿ ಮೂಲಕ ಘಟಕದ ವಿವಿಧ ಜವಾಬ್ದಾರಿ ನಿರ್ವಹಿಸಿ 2019 ರಲ್ಲಿ ಜೆಸಿಐ ಬೆಳ್ತಂಗಡಿ ಇದರ ಅಧ್ಯಕ್ಷನಾಗಿ ಮೂಡಿಬಂದವರು. 2022 ರಲ್ಲಿ ಜೆಸಿಐ ವಲಯ 15 ರ ವಲಯ ಉಪಾಧ್ಯಕ್ಷನಾಗಿ ಚುನಾಯಿತರಾಗಿ 2023 ರಲ್ಲಿ ವಲಯ 15 ಆಡಳಿತ ವಿಭಾಗದ ನಿರ್ದೇಶಕರಾಗಿ ತನ್ನ ಹುದ್ದೆಗೆ ನ್ಯಾಯ ಕೊಟ್ಟವರು. 2025 ನೇ ಸಾಲಿನ ವಲಯಾಧ್ಯಕ್ಷ ಸ್ಥಾನಕ್ಕೆ ಪೈಪೊಟಿ ನೀಡಿ ಕೊನೆಯ ಗಳಿಗೆಯಲ್ಲಿ ನಾಮಪತ್ರ ಹಿಂಪಡೆಯುವ ಮೂಲಕ ಇನ್ನೊಬ್ಬರಿಗೆ ಅವಕಾಶ ಮಾಡಿಕೊಟ್ಟವರು.

‘ಕಮಲ ಪತ್ರ’ ಪ್ರಶಸ್ತಿ ಎಂಬುದು ಜೂನಿಯರ್ ಛೇಂಬರ್ ಇಂಟರ್ನ್ಯಾಷನಲ್, ಇಂಡಿಯಾ ಸಂಸ್ಥೆಯಿಂದ ನೀಡಲ್ಪಡುವ ಒಂದು ಅತ್ಯುನ್ನತ ಗೌರವವಾಗಿದೆ. ಇದು ಜೆಸಿಐ ಇಂಡಿಯಾದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದು ಆಗಿದ್ದು, ಅಸಾಧಾರಣ ಸಾಧನೆಗಳನ್ನು ಮಾಡಿದ ಹಾಗೂ ಜೆಸಿಐ ಚಳವಳಿಗೆ ತಮ್ಮ ಸಮರ್ಪಣೆಯನ್ನು ತೋರಿದ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಈ ವರ್ಷದ ‘ಕಮಲ ಪತ್ರ’ ಪ್ರಶಸ್ತಿ ಜೆಸಿಐ ಬೆಳ್ತಂಗಡಿಯ ಒಬ್ಬ ನೈಜ ಜೇಸಿಗೆ ಲಭಿಸಿರುವುದು ಹೆಮ್ಮೆಯ ಸಂಗತಿ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೆಸಿಐ ಭಾರತದ ರಾಷ್ಟ್ರೀಯ ಹಾಗೂ ವಲಯದ ನಾಯಕರುಗಳು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಸಾವಿರಕ್ಕೂ ಹೆಚ್ಚಿನ ಜೇಸಿ ಸದಸ್ಯರು ಜೆಸಿಐ ಬೆಳ್ತಂಗಡಿ ನಿಕಟಪೂರ್ವಾಧ್ಯಕ್ಷ ಹಾಗೂ ವಲಯ ಉಪಾಧ್ಯಕ್ಷ ರಂಜಿತ್ ಎಚ್‌ಡಿ, ಜೆಸಿಐ ಬೆಳ್ತಂಗಡಿ ಅಧ್ಯಕ್ಷೆ ಆಶಾಲತಾ ಪ್ರಶಾಂತ್, ಘಟಕದ ಪೂರ್ವಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here