ಮಿತ್ತಬಾಗಿಲು: ಮಲವಂತಿಗೆ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಕುಂದಾಪುರದಲ್ಲಿ ಗೌರವಾರ್ಪಣೆ

0

ಮಿತ್ತಬಾಗಿಲು: ಕುಂದಾಪುರ ಬಿಲ್ಲವ ಸಂಘಕ್ಕೆ ಮಲವಂತಿಗೆ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದಿಂದ ಭೇಟಿ ನೀಡಿದರು. ಈ ಸಮಯದಲ್ಲಿ ಕುಂದಾಪುರ ಬಿಲ್ಲವ ಸಂಘದ ಅದ್ಯಕ್ಷ ಅಶೋಕ ಪೂಜಾರಿಯವರು ಬರಮಾಡಿಕೊಂಡು ಸ್ವಾಗತಿಸಿ, ಸಮಾಲೋಚನೆ ನಡೆಸಿದರು. ಕುಂದಾಪುರ ಸಂಘದ ಸದಸ್ಯ ಕೋಡಿ ಸುನಿಲ್ ಪೂಜಾರಿ, ಮಿತ್ತಬಾಗಿಲು ಸಂಘದ ಅಧ್ಯಕ್ಷ ಸುರೇಂದ್ರ ಪೂಜಾರಿ ಬನದಬಾಗಿಲು ಉಪಸ್ಥಿತರಿದ್ದರು. ಕುಂದಾಪುರ ಬಿಲ್ಲವ ಸಮಾಜ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಅವರಿಂದ ಮಿತ್ತಬಾಗಿಲು – ಮಲವಂತಿಗೆ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ರೂ. ಹತ್ತು ಸಾವಿರ ಮೊತ್ತದ ಸಹಾಯಧನದ ಜೊತೆಗೆ ಕೋಟಿ ಚೆನ್ನಯ ಫೋಟೋ ಕೊಡುಗೆಯಾಗಿ ನೀಡಿದರು.

LEAVE A REPLY

Please enter your comment!
Please enter your name here