


ಬೆಳ್ತಂಗಡಿ: ರಾ.ಹಿಂದೂ ಜಾಗರಣಾ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾರೆಂದು ಆರೋಪಿಸಿ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂಗೆ ಮನವಿ ನೀಡಲು ಆಗಮಿಸಿದ ರಾ.ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.



ಅನಿಲ್, ಪ್ರಜ್ವಲ್ ಕೆ.ವಿ. ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಇದಾದ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಹೋರಾಟಗಾರ್ತಿ ಪ್ರಸನ್ನ ರವಿ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ತದಬಳಿಕ ತಹಶೀಲ್ದಾರ್ ಇಲ್ಲದ ಕಾರಣ ಠಪಾಲು ಮೂಲಕ ಪ್ರಸನ್ನರವಿ ಮತ್ತು ಕುಸುಮಾವತಿ ಮನವಿ ರವಾನಿಸಿದರು. ತದಬಳಿಕ ತಹಶೀಲ್ದಾರ್ ಕಚೇರಿಯೆದುರು ನೆರೆದಿದ್ದ ಗುಂಪು ಚದುರಿದೆ.








