ಬೆಳ್ತಂಗಡಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಕೇಂದ್ರ ಕಚೇರಿ ತುಮಕೂರು,ನೇತ್ರಾವತಿ ವಲಯ, ಮಂಗಳೂರು, ದಕ್ಷಿಣ ಕನ್ನಡ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನ ಯೋಗ ಬಂಧುಗಳು ಕಾಯರ್ತಡ್ಕದ ಶ್ರೀ ನಂದಗೋಕುಲ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆಯನ್ನು ಆಚರಿಸಿದರು.
ಸುಮಾರು 90ಕ್ಕೂ ವಿಕ್ಕಿ ಯೋಗ ಬಂಧುಗಳು ಗೋಶಾಲೆಯನ್ನು ಹಾಗೂ ಗೋವುಗಳನ್ನು ಸ್ವಚ್ಛಗೊಳಿಸಿ ಗೋಮಾತೆಗೆ ಅಲಂಕಾರ ಮಾಡಿ ಆರತಿಯನ್ನು ಬೆಳಗಿ ಗೋಗ್ರಾಸವನ್ನು ನೀಡುವ ಮೂಲಕ ಗೋಪೂಜೆಯನ್ನು ನೆರವೇರಿಸಿದರು.
ಯೋಗ ಬಂಧುಗಳಾದ ವಸಂತ ಕೆಂಬರ್ಜೆ ದಂಪತಿಗಳು ಗೋಪೂಜೆಯ ಮುಂದಾಳತ್ವ ವನ್ನು ವಹಿಸಿದರು. ಜಿಲ್ಲಾ ಸಮಿತಿಯ ಮಾರ್ಗದರ್ಶನದೊಂದಿಗೆ ಯೋಗ ತರಗತಿಯ ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್ ಅವರ ನೇತೃತ್ವದಲ್ಲಿ ಸಹ ಶಿಕ್ಷಕರುಗಳಾದ ಸಂತೋಷ ಕಾಪಿನಡ್ಕ, ಸುಕೇಶ್ ಗೇರುಕಟ್ಟೆ, ಶಶಿಕಲಾ ವಿಶ್ವನಾಥ್, ಕೋಮಲ ಪ್ರಕಾಶ್, ಗಣೇಶ್ ಪ್ರಸಾದ್, ರಕ್ಷಿತಾ ಪ್ರಸಾದ್ ಅವರ ಸಹಕಾರದೊಂದಿಗೆ ಈ ಕಾರ್ಯಕ್ರಮವು ಸಂಪನ್ನಗೊಂಡಿತು.
ಗೋಶಾಲೆಯ ಸಿಬ್ಬಂದಿಗಳು ಸಂಪೂರ್ಣ ಸಹಕಾರವನ್ನು ನೀಡಿದರು. ಯೋಗ ಬಂಧುಗಳಾದ ಅಶ್ವಥ್ ಇವರು ಗೋ ಪೂಜೆಯ ಮಹತ್ವ ಹಾಗೂ ಅವಶ್ಯಕತೆಯ ಬಗ್ಗೆ ಬೌದ್ಧಿಕವನ್ನು ನೀಡಿದರು. ಹಾಗೂ ರವಿಕಲ ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.