ಪಡಂಗಡಿ: ಗ್ರಾಮ ಪಂಚಾಯತ್ ವ್ಯಾಪ್ತಿಯ ಗಣಪತಿ ಸಭಾ ಭವನದಲ್ಲಿ ಬದ್ಯಾರ್ ಫಾದರ್ ಎಲ್.ಎಂ.ಪಿಂಟೋ ಆಸ್ಪತ್ರೆ, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆ, ಪಡಂಗಡಿ ಶ್ರೀ ಗಣೇಶೋತ್ಸವ ಸಮಿತಿ, ಗ್ರಾಮ ಪಂಚಾಯತ್, ಹಾಲು ಉತ್ಪಾದಕರ ಸಹಕಾರಿ ಸಂಘ, ಮಂಗಳೂರು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಅ.19ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಮಹಿಳೆಯರ ಕ್ಯಾನ್ಸರ್ ತಪಾಸನಾ ಶಿಬಿರ ಆಯೋಜಿಸಲಾಗಿತ್ತು.
ಶಿಬಿರವನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಪೂಜಾರಿ ಉದ್ಘಾಟಿಸಿ ಉದ್ಘಾಟನಾ ಭಾಷಣ ಮಾಡಿ ಶಿಬಿರದ ಯಶಸ್ವಿಗೆ ಶುಭ ಹಾರೈಸಿದರು. ಬದ್ಯಾರ್ ಫಾದರ್ ಎಲ್ ಎಂ ಪಿಂಟೋ ಆಸ್ಪತ್ರೆಯ ಆಡಳಿತಾಧಿಕಾರಿ ಶಿಬಿರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಹರೀಶ್ ಪೂಂಜ ಶಿಬಿರದ ಬಗ್ಗೆ ಮಾತನಾಡಿ ನಾವೆಲ್ಲ ಕನಿಷ್ಠ ವರ್ಷದಲ್ಲಿ 100 ದಿನವಾದರೂ ಮನೆಯಲ್ಲೇ ಬೆಳೆಸಿದ ತರಕಾರಿಗಳನ್ನು ಉಪಯೋಜಿಸುವ ಸಂಕಲ್ಪ ಮಾಡಬೇಕು ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಲು ನಾವು ಶ್ರಮಿಸಬೇಕೆಂದು ಹಿತ ನುಡಿದು ಶಿಬಿರದ ಯಶಸ್ವಿಗೆ ಹಾರೈಸಿದರು.
ಗ್ರಾಮ ಪಂಚಾಯತ್ ಸದಸ್ಯ ಸಂತೋಷ ಕುಮಾರ್ ಜೈನ್ ಮಾತನಾಡಿ ಎಲ್ಲಾ ಸಂಪತ್ತಿಂಗಿತಲು ಮಿಗಿಲಾದ ಸಂಪತ್ತು ಅದು ಆರೋಗ್ಯ ಅದನ್ನು ಕಾಪಾಡಿ ನೆಮ್ಮದಿಯ ಜೀವನವನ್ನು ಸಾಗಿಸಬೇಕೆಂಬ ಹಿತನುಡಿಯೊಂದಿಗೆ ಶಿಬಿರದ ಯಶಸ್ವಿಗಾಗಿ ಹಾರೈಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಫನಾ ಸ್ವಾಗತಿಸಿದರು. ಎಲ್ ಎಂ ಆಸ್ಪತ್ರೆ ಸಿಬ್ಬಂದಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.