ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ದಿನದ ಪ್ರಯುಕ್ತ ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಸಮಿತಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದೊಂದಿಗೆ ಸಂಚಾರಿ ನಿಯಮ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.
ಬೆಳ್ತಂಗಡಿ ಸಂಚಾರಿ ಠಾಣೆಯ ಪಿ.ಎಸ್. ಐ.ನಿಂಗಪ್ಪ ಜಕ್ಕಣ್ಣನವರ್ ವಾಹನ ಚಲಾಯಿಸುವಾಗ ಅನುಸರಿಸಬೇಕಾದ ನಿಯಮಗಳು, ಬೈಕ್ ಚಲಾಯಿಸಲು ಸವಾರನಿಗೆ ಹೆಲ್ಮೆಟ್ ಕಡ್ಡಾಯ ಕಾನೂನು, ವಾಹನ ಚಲಾವಣೆಗೆ ಇರಬೇಕಾದ ಅರ್ಹತೆ ಹಾಗೂ ನಿಯಮ ಉಲ್ಲಂಘಸಿದರೆ ವಿಧಿಸುವ ದಂಡ, ಪೋಕ್ಸೋ ಕಾಯಿದೆ, ಮಾದಕ ವಸ್ತುಗಳ ದುಷ್ಪಪರಿಣಾಮ, ಜಾಗೃತಿ, ಕಾನೂನಿಗೆ ಭಂಗ ತರುವ ಸಂಘಟನೆಗಳಲ್ಲಿ ಭಾಗವಹಿಸುವುದು ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಆಂಗ್ಲ ಭಾಷಾವಿಭಾಗದ ಮುಖ್ಯಸ್ಥೆ ಸೀಮಾ ಅಧ್ಯಕ್ಷೆತೆ ವಹಿಸಿದ್ದರು. ವೇದಿಕೆಯಲ್ಲಿ ಸಾಂಸ್ಕೃತಿಕ ಸಮಿತಿಯ ಸಂಯೋಜಕ ನಾಗರಾಜ್ ಭಂಡಾರಿ, ಎನ್.ಎಸ್.ಎಸ್ ಯೋಜನಾಧಿಕಾರಿ ವಿಶ್ವನಾಥ್ ಎಸ್., ಸಹ ಯೋಜನಾಧಿಕಾರಿ ಶೋಭಾ ಪಿ., ಹಿಂದಿ ವಿಭಾಗದ ಉಪನ್ಯಾಸಕಿ ಫ್ಲೇವಿಯಾ ಪೌಲ್, ಜೀವ ಶಾಸ್ತ್ರ ವಿಭಾಗದ ಉಪನ್ಯಾಸಕಿ ಕವನಶ್ರೀ ಜೈನ್, ಪ್ರಣಮ್ಯ ಜಿ.ಕೆ. ಸ್ವಾಗತಿಸಿದರು. ಸ್ವಯಂ ಸೇವಕಿ ರಾಶಿಕ ನಿರೂಪಿಸಿದರು. ಮೇಧಾ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಪಂಚಮಿ ವಂದಿಸಿದರು.