ಮುಂಡಾಜೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅ. 17ರಂದು ರೇಬಿಸ್ ಲಸಿಕೆ ಶಿಬಿರ ಜರಗಿತು. ಮುಂಡಾಜೆ ಗ್ರಾ.ಪಂ. ಅಧ್ಯಕ್ಷ ಗಣೇಶ ಬಂಗೇರ ಶಿಬಿರಕ್ಕೆ ಚಾಲನೆ ನೀಡಿದರು. ಎರಡು ತಂಡಗಳಲ್ಲಿ ಗ್ರಾಮದ 21 ಕಡೆ 251 ಸಾಕುನಾಯಿ ಹಾಗೂ ಬೆಕ್ಕುಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ ನೀಡಲಾಯಿತು.
ಮುಂಡಾಜೆ ರೋಟರಿ ಸಮುದಾಯದಳದ ಅಧ್ಯಕ್ಷ ಪಿ.ಸಿ.ಸೆಬಾಸ್ಟಿಯನ್, ಸದಸ್ಯ ಬಾಬು ಪೂಜಾರಿ, ಗ್ರಾಪಂ ಸದಸ್ಯ ರಾಮಣ್ಣ ಶೆಟ್ಟಿ, ಅಶ್ವಿನಿ ದಿನೇಶ್, ಪಂಚಾಯಿತಿ ಸಿಬ್ಬಂದಿ,ಮತ್ತಿತರರು ಭಾಗವಹಿಸಿದ್ದರು. ಹಿರಿಯ ಪಶು ವೈದ್ಯ ಪರೀಕ್ಷಕ ರಾಜವರ್ಮ ಜೈನ್, ಪಶುವೈದ್ಯ ಪರೀಕ್ಷಕ ಗಂಗಾಧರ ಸ್ವಾಮಿ ಲಸಿಕೆ ಕಾರ್ಯಕ್ರಮ ನಡೆಸಿದರು. ಗ್ರಾ.ಪಂ. ಮುಂಡಾಜೆ, ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಬೆಳ್ತಂಗಡಿ, ರೋಟರಿ ಸಮುದಾಯದಳ ಮುಂಡಾಜೆ ಇವರ ಆಶ್ರಯದಲ್ಲಿ ಕಾರ್ಯಕ್ರಮ ಜರಗಿತು.