ಶಿಶಿಲ: ಅ. 19ರಂದು ಶಿಶಿಲ ಅಡ್ಡಹಳ್ಳ ಫ್ರೆಂಡ್ಸ್ ಸಾರಥ್ಯದಲ್ಲಿ ದೋಸೆ ಹಬ್ಬ -ಬೃಹತ್ ಹಗ್ಗಜಗ್ಗಾಟ ಕಾರ್ಯಕ್ರಮ ಶಿಶಿಲದ ಅಡ್ಡಹಳ್ಳದಲ್ಲಿ ನಡೆಯಲಿದೆ. ಮುಂಜಾನೆ ದೋಸೆ ಹಬ್ಬಕ್ಕೆ ಶಿಶಿಲೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸೂರಜ್ ನೆಲ್ಲಿತ್ತಾಯ ಚಾಲನೆ ನೀಡಲಿದ್ದಾರೆ.
ರಾತ್ರಿ 8ಗಂಟೆಗೆ ಅಡ್ಡಹಳ್ಳ ಫ್ರೆಂಡ್ಸ್ ತಂಡದ ಅಧ್ಯಕ್ಷರಾದ ಕರುಣಾಕರ ಶಿಶಿಲ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಶಾಸಕ ಹರೀಶ್ ಪೂಂಜ, ಹಿಂದೂ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ಬರ್ಗುಳ, ಶಿಶಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀನ್ ಡಿ., ಶಿಶಿಲೇಶ್ವರ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಸುನಿಲ್ ಗೋಖಲೆ, ಶಿಶಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿಶಿಲ ವಲಯದ ಮೇಲ್ವಿಚಾರಕಿ ಗಾಯತ್ರಿ ಮತ್ತು ರಶ್ಮಿತಾ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.