ಉಜಿರೆ: ಗ್ರಾಮದ ರೆಂಜಾಳ ನಿವಾಸಿ ಪೈಂಟರ್ ಪ್ರಮೋದ್ ಗೌಡ ಅವರು ಪೈಂಟಿಂಗ್ ಮಾಡುತ್ತಿರುವ ಸಂದರ್ಭ ಸುಮಾರು 18 ಅಡಿ ಎತ್ತರದಿಂದ ಕುಸಿದುಬಿದ್ದು ತಲೆಯ ಭಾಗ ಹಾಗೂ ಕುತ್ತಿಗೆಯ ಸ್ಟೈನಲ್ ಕ್ವಾರ್ಡ(spinal cord) ಸಂಪೂರ್ಣವಾಗಿ ಮುರಿತಕ್ಕೊಳಗಾಗಿದ್ದು ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೆ ಸುಮಾರು ರೂ. 2 ರಿಂದ 3 ಲಕ್ಷದವರೆಗೆ ವೆಚ್ಚವಾಗಿದ್ದು ಇನ್ನು ಮುಂದಿನ ಚಿಕಿತ್ಸೆಗೆ ಸರಿಸುಮಾರು ರೂ.10 ರಿಂದ 15 ಲಕ್ಷದವರೆಗೆ ಹಣದ ಅವಶ್ಯಕತೆ ಇರುತ್ತದೆ ಎಂದು ಮನೆಯವರು ತಿಳಿಸಿದ್ದಾರೆ.