ಮಲೆಕುಡಿಯ ಸಮುದಾಯದ ಎಲ್ಲರೂ ಅಭಿವೃದ್ಧಿ ಹೊಂದುವಂತಾಗಲಿ: ಹರೀಶ್ ಎಳನೀರು-ಬೆಳ್ತಂಗಡಿ ಶಿವ ಪಾರ್ವತಿ ಭಜನಾ ಮಂದಿರ ನಿರ್ಮಾಣ ಸಮಿತಿ ರಚನೆ

0

ಬೆಳ್ತಂಗಡಿ: ಹಿರಿಯರು ಆರಾಧಿಸಿಕೊಂಡು ಬಂದಿರುವ ಶಿವಪಾರ್ವತಿಯ ಭಜನಾ ಮಂದಿರವನ್ನು ಎಲ್ಲರೂ ಸೇರಿ ಉತ್ತಮ ರೀತಿಯಲ್ಲಿ ನಿರ್ಮಿಸೋಣ. ಭಜನಾ ಮಂದಿರ ನಿರ್ಮಾಣದ ಜೊತೆಗೆ ಸಮುದಾಯ ಭವನವೂ ಅಭಿವೃದ್ಧಿ ಹೊಂದುವಂತಾಗಲಿ ಎಂದು ಮಲೆಕುಡಿಯರ ಸಂಘ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಹರೀಶ್ ಎಳನೀರು ಹೇಳಿದರು.

ಅವರು ಅ. 12ರಂದು ಬೆಳ್ತಂಗಡಿ ತಾ. ಕೊಯ್ಯೂರು ಶಿವಗಿರಿಯಲ್ಲಿರುವ ಮಲೆಕುಡಿಯರ ಸಮುದಾಯ ಭವನದಲ್ಲಿ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನೂತನ ಭಜನಾ ಮಂದಿರ ನಿರ್ಮಾಣದ ಸಮಿತಿಯನ್ನು ರಚನೆ ಮಾಡಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಲೆಕುಡಿಯ ಸಮುದಾಯಕ್ಕೆ ಮಲೈಕುಡಿ, ಕುಡಿಯ ಮುಂತಾದ ಜಾತಿ ಪ್ರಮಾಣಪತ್ರಗಳ ಬದಲಾಗಿ ಮಲೆಕುಡಿಯ ಎಂಬ ಏಕರೂಪ ಜಾತಿಪ್ರಮಾಣ ಪತ್ರ ನೀಡುವ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಹಾಗೆಯೇ ಪೌಷ್ಠಿಕ ಆಹಾರ, ವಿದ್ಯುತ್ ಸಮಸ್ಯೆಗಳ ಪರಿಹಾರದ ಬಗ್ಗೆ ಪ್ರಸ್ತಾಪ ಮಾಡಿದರು.

ಶಿವಪಾರ್ವತಿ ಭಜನಾ ಮಂದಿರ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರಾಗಿ ಜಿ.ಕೆ. ನಾರಾಯಣ ಧರ್ಮಸ್ಥಳ, ಅಧ್ಯಕ್ಷರಾಗಿ ಪರಮೇಶ್ವರ ಉಜಿರೆ, ಉಪಾಧ್ಯಕ್ಷರಾಗಿ ಶ್ರೀನಿವಾಸ ಉಜಿರೆ ಪ್ರಧಾನ ಕಾರ್ಯದರ್ಶಿಯಾಗಿ ದೇವಪ್ಪ ಎಂ.ಕೆ. ಕನ್ಯಾಡಿ, ಜೊತೆ ಕಾರ್ಯದರ್ಶಿಯಾಗಿ ರಾಮಣ್ಣ ಪಂಡಿಂಜೆ, ಖಜಾಂಚಿಯಾಗಿ ಕೃಷ್ಣಪ್ಪ ಕಾಶಿಬೆಟ್ಟು, ಸಂಘಟನಾ ಕಾರ್ಯದರ್ಶಿಗಳಾಗಿ ನೋಣಯ್ಯ ಮಂಗಳೂರು, ಶಿವರಾಮ ಉಜಿರೆ ಗೌರವ ಸಲಹೆಗಾರರಾಗಿ ಸಂಜೀವ ಕುಲ್ಲಾಜೆ ಕೊಯ್ಯೂರು, ವಸಂತಿ ನೆಲ್ಲಿಕಾರು, ವಾರಿಜ ಉಜಿರೆ, ಬಾಲಕೃಷ್ಣ ಕೆ. ಪೊಳಲಿ, ಜಯರಾಮ ಆಲಂಗಾರು, ಮಹಾಬಲ ಮಲೆಕುಡಿಯ ಸವಣಾಲು, ಹಾಗೂ ಸದಸ್ಯರುಗಳಾಗಿ ಜಯಪ್ರಕಾಶ್ ಎನ್., ಪುತ್ತೂರು, ರಾಮ ಕಿಲಾರಿಪಾಡಿ ಪುತ್ತೂರು, ಜಯಾನಂದ ಪಿಲಿಕಲ ಇವರನ್ನು ಆಯ್ಕೆ ಮಾಡಲಾಯಿತು. ಹಾಗೆಯೇ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಈ ಸಮಿತಿಯೊಂದಿಗೆ ಕೈ ಜೋಡಿಸಲಿದ್ದಾರೆ. ಭಜನಾ ಮಂದಿರ ನಿರ್ಮಾಣ ಸಮಿತಿಯ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗುವುದು ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಯಿತು.

ಸಮುದಾಯದ ಅಭಿವೃದ್ಧಿಗಳ ಬಗ್ಗೆ ಶ್ರೀನಿವಾಸ ಉಜಿರೆ, ದೇವಪ್ಪ ಎಂ.ಕೆ. ಕನ್ಯಾಡಿ, ಜಯಪ್ರಕಾಶ್ ಪುತ್ತೂರು, ಜಯರಾಮ ಆಲಂಗಾರು ಸಭೆಯನ್ನು ಉದ್ದೇಶಿಸಿ ಅಭಿಪ್ರಾಯಗಳನ್ನು ಮಂಡಿಸಿದರು. ವೇದಿಕೆಯಲ್ಲಿ ಮಲೆಕುಡಿಯ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷೆ ವಸಂತಿ ನೆಲ್ಲಿಕಾರು, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಕೆ. ಪೊಳಲಿ, ಪರಮೇಶ್ವರ ಉಜಿರೆ, ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ಸಂಜೀವ ಕುಲ್ಲಾಜೆ ಉಪಸ್ಥಿತರಿದ್ದರು.
ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯೇಂದ್ರ ಎಂ. ನಿಡ್ಲೆ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ವಂದಿಸಿದರು.

LEAVE A REPLY

Please enter your comment!
Please enter your name here