ಬೆಳಾಲು: ಕುಂಡಡ್ಕ ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಮಹಾಸಭೆ ಅ. 4ರಂದು ಗ್ರಾಮ ಸಮಿತಿ ಅಧ್ಯಕ್ಷ ಗಂಗಾಧರ ಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು. ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ವಲಯ ಅರಣ್ಯಾಧಿಕಾರಿ ಹೆಚ್. ಜಿ. ರಾಘವೇಂದ್ರ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸುರೇಂದ್ರ ಗೌಡ ಎಸ್., ಕೃಷ್ಣಯ್ಯ ಆಚಾರ್ಯ, ಸಮಿತಿಯ ಸದಸ್ಯ ಕಾರ್ಯದರ್ಶಿ ಬಿ. ಜೆರಾಲ್ಡ್ ಡಿಸೋಜ, ಅರಣ್ಯ ರಕ್ಷಕ ಜಗದೀಶ್, ಅರಣ್ಯ ಪಾಲಕ ಸಂತೋಷ ಉಪಸ್ಥಿತರಿದ್ದರು. ಲೀಲಾವತಿ, ಉಷಾ ಗಂಗಾಧರ್, ವೇದಾವತಿ, ವಾಣಿ ಪ್ರಾರ್ಥನೆ ಗೈದರು. ಕರಿಯಣ್ಣ ಗೌಡ ಬೇರಿಕೆ ಕಾರ್ಯಕ್ರಮ ನಿರೂಪಿಸಿದರು. ಉಮಾದೇವಿ ಸ್ವಾಗತಿಸಿ, ಸತೀಶ್ ನಾಯ್ಕ ವಂದಿಸಿದರು.