ಬೆಳ್ತಂಗಡಿ: ಕೊಯ್ಯುರಿನ ಶ್ರೀ ಪಂಚದುರ್ಗಾ ದೇವಾಲಯದಲ್ಲಿ ನವರಾತ್ರಿಯ ಪ್ರಯುಕ್ತ ಪ್ರೊ. ಮಧೂರು ಮೋಹನ ಕಲ್ಲೂರಾಯ ಮತ್ತು ಬಳಗದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಹರಿಕಥೆ ನಡೆಯಿತು. ಹಾರ್ಮೋನಿಯಲ್ಲಿ ಮುರಳಿ ಕೃಷ್ಣ, ತಬಲದಲ್ಲಿ ಸಚಿನ್ ಕುದುರೆಪಾಡಿ, ಸಹ ಗಾಯನದಲ್ಲಿ ಸುವರ್ಣ ಕುಮಾರಿ, ವಿಷ್ಣು ಪ್ರಸಾದ ಕಲ್ಲೂರಾಯ, ಸುಮಂಗಲ ಕುಂಟಿನಿ ಸಹಕರಿಸಿದರು. ಪ್ರಧಾನ ಅರ್ಚಕ ಅಶೋಕ್ ಕುಮಾರ್ ಭಟ್ ಅಗ್ರಶಾಲೆ ಅವರು ಪ್ರಾಯೋಜಕತ್ವವನ್ನು ಮಾಡಿದ್ದರು.