ಶಿರ್ಲಾಲು: ರಿಕ್ಷಾ ಚಾಲಕ ಮಾಲಕ ಸಂಘದಿಂದ ಅ.1ರಿಂದ ಆಯುಧ ಪೂಜೆಯು ರಿಕ್ಷಾ ಪಾರ್ಕಿನಲ್ಲಿ ಲೋಕನಾಥೇಶ್ವರ ದೇವಸ್ಥಾನದ ಪ್ರದಾನ ಅರ್ಚಕ ಸೂರ್ಯ ನಾರಾಯಣ ರಾವ್ ಪೌರೋಹಿತ್ಯದಲ್ಲಿ ವಿಜೃಂಭಣೆಯಿಂದ ನಡೆಯಿತು. ಹಮೀದ್ (ಹಿರಿಯ ರಿಕ್ಷಾ ಚಾಲಕ), ಅಶ್ವಥ್ ಸುಲ್ಕೇರಿಮೊಗ್ರು( ಜೀವ ರಕ್ಷಕರು ಆಂಬುಲೆನ್ಸ್) ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಅಶೋಕ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಸಾದ್ ನಲ್ಲಾರ್ ಗುತ್ತು ನಿರ್ವಹಿಸಿದರು.