ಉಜಿರೆ: ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ವ್ಯವಹಾರ ನಡೆಸಲು ಸೂಕ್ತವಾದ ಮಾರ್ಗದರ್ಶನ, ಸಹಕಾರ ನೀಡುವರರ ಸಂಖ್ಯೆ ಕಡಿಮೆ ಇತ್ತು. ಇಂತಹ ಸಮಯದಲ್ಲಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ದೂರರ್ಶಿದೃಷ್ಟಿತ್ವ ಈ ರುಡ್ ಸೆಟ್ ಸಂಸ್ಥೆಯ ಮೂಲಕ ನಿಮಗೆ ಮಾರ್ಗದರ್ಶನ, ಬೆಂಬಲ ನೀಡುವ ಅತ್ಯುತ್ತಮವಾದ ಕೆಲಸ ಮಾಡುತ್ತಿದ್ದೆ. ಹೆಗ್ಗಡೆಯವರು ಒಂದು ಮಾತು ಹೇಳುತ್ತಾ ಇರುತ್ತಾರೆ ಒಳ್ಳೆಯ ಮನಸ್ಸು ಇದ್ದಲ್ಲಿ ಒಳ್ಳೆಯ ಯಶಸ್ಸು ಇರುತ್ತದೆ ಎಂದು ಅದೇ ರೀತಿ ಸೌಂದರ್ಯ ಅಂದರೆ ಕೇವಲ ಬಾಹ್ಯ ಸೌಂದರ್ಯ ಅಲ್ಲ ವ್ಯಕ್ತಿಯ ಅಂತರಿಕ ಸೌಂದರ್ಯ ಬಹು ಮುಖ್ಯ. ಗ್ರಾಹಕರಿಗೆ ಸೌಂದರ್ಯ ಮಾಹಿತಿಯನ್ನು ನೀಡಬೇಕು. ಮದುವೆಯಾಗುವ ಮದುಮಗಳು ನಿಮ್ಮ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡಿರುತ್ತಾರೆ, ನೀವು ಅತ್ಯುತ್ತಮವಾದದನ್ನು ಮಾಡಿಕೊಡಬೇಕು. ಅದೇ ರೀತಿ ಸ್ಯಾರಿ ಕುಚ್ಚು ಮತ್ತು ಎಂಬ್ರಾಯ್ಡರಿ ವೃತ್ತಿ ಸಹ ಒಳ್ಳೆಯದ್ದು ಅದನ್ನು ಮುಂದುವರೆಸಿ, ಗ್ರಾಹಕರ ನಂಬಿಕೆ ಉಳಿಸಿಕೊಂಡು ಉತ್ತಮವಾದ ಬಾಂಧವ್ಯವನ್ನು ಬೆಳೆಸಿಕೊಳ್ಳಿ, ನಿಮ್ಮ ವೃತ್ತಿ ಜೀವನದ ದಾರಿಯಲ್ಲಿ ನಿಮಗೆಲ್ಲ ಯಶಸ್ಸು ಸಿಗಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಮೈತ್ರಿ ನಂದಿಶ್ ಅಭಿಪ್ರಾಯಪಟ್ಟರು.
ಅವರು ಉಜಿರೆ ರುಡ್ಸೆಟ್ ಸಂಸ್ಥೆಯಲ್ಲಿ ಮಹಿಳಾ ಬ್ಯೂಟೀಪಾರ್ಲರ್ ಮತ್ತು ಸ್ಯಾರಿ ಕುಚ್ಚು ಮತ್ತು ಎಂಬ್ರಾಯ್ಡರಿ -ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯ ಕುಮಾರ್ ವಹಿಸಿ, ಮಾತನಾಡಿ ಕೌಶಲ್ಯ ತರಬೇತಿಯಲ್ಲಿ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯು ಸ್ವ ಉದ್ಯೋಗ ಮಾಡುದಕ್ಕೆ ಬಹಳ ಸಹಾಯವಾಗುತ್ತದೆ. ಇದನ್ನು ವೃತ್ತಿಯಲ್ಲಿ ಅಳವಡಿಸಿಕೊಂಡು ಮುಂದುವರೆಯಿರಿ. ಇದಕ್ಕೆ ಬೇಕಾಗುವ ಸಾಲ ಸೌಲಭ್ಯಗಳಿಗೆ ಬ್ಯಾಂಕಗಳನ್ನು ಸಂಪರ್ಕ ಮಾಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಕೆ.ಡಿ.ಆರ್.ಡಿ.ಪಿಯ ನಿಕಟಪೂರ್ವಕ ಪ್ರಾದೇಶಿಕ ನಿರ್ದೇಶಕ ಮಾಹಾವೀರ ಅಜ್ರಿ ಅವರು ಉಪಸ್ಥಿತರಿದ್ದರು. ಕೆಲವು ಶಿಭಿರಾರ್ಥಿಗಳು ತಮ್ಮ ತರಬೇತಿಯ ಅನುಭವ ಹಂಚಿಕೊಂಡರು. ಕಾರ್ಯಕ್ರಮದಮಲ್ಲಿ ಅಥಿತಿ ಉಪನ್ಯಾಸಕಿಯರಾದ ಮಾಧವಿ ರೈ ಪುತ್ತೂರು ಮತ್ತು ರಶ್ಮಿ ರಾಘವೇಂದ್ರ, ಚಿಕ್ಕಮಗಳೂರು ಉಪಸ್ಥಿತರಿದ್ದರು. ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಅವರು ತರಬೇತಿಯ ಹಿನ್ನೋಟ ನೀಡಿ, ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ಕರುಣಾಕರ ಜೈನ್ ವಂದಿಸಿದರು.