ಬೆಳ್ತಂಗಡಿ: ಕೇಂದ್ರ ಸರಕಾರದ ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳಿಗೆ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ದೇಶಕ್ಕೆ ದ್ವಿತೀಯ ರ್ಯಾಂಕ್, ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದು ಹಾಗೂ ದ್ವಿತೀಯ ಪಿಯುಸಿ ವಾಣಿ ಕಾಲೇಜಿನಲ್ಲಿ ಪೂರೈಸಿದ್ದು ರಾಜ್ಯಮಟ್ಟದಲ್ಲಿ 6ನೇ ರ್ಯಾಂಕ್ ಪಡೆದಿದ್ದರು.
ವಿಭಾ ಕೆ.ಆರ್. ಮೂಲತಃ ಬೆಳ್ತಂಗಡಿ ತಾಲೂಕಿನ ಶಿರ್ಲಾಲಿನವರು. ಇವರ ತಂದೆ ರವಿರಾಜ್ ಗೌಡ ದೈಹಿಕ ಶಿಕ್ಷಕರಾಗಿದ್ದು, ತಾಯಿ ಮೀರಾ ಹೆಚ್. ಸಿ. ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಈ ಸಾಧನೆಯನ್ನು ವಾಣಿ ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರು ಅಪಾರವಾಗಿ ಮೆಚ್ಚಿಕೊಂಡು ಇವರ ಉನ್ನತ ವ್ಯಾಸಂಗಕ್ಕೆ ಶುಭಕೋರಿದ್ದಾರೆ.