ಮಡಂತ್ಯಾರು: ಸೆಕ್ರೆಡ್ ಹಾರ್ಟ್ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಮತ್ತು ವಾಣಿಜ್ಯ ವಿಭಾಗದ ಸಹಯೋಗದಲ್ಲಿ, ಲ್ಯುಮಿನೇರ್ ಅಕಾಡೆಮಿ ಆಫ್ ಫೈನಾನ್ಷಿಯಲ್ ಮ್ಯಾನೇಜ್ಮೆಂಟ್ LLP (LeAF Academy) ಸಂಸ್ಥೆಯೊಂದಿಗೆ ಒಪ್ಪಂದ ಪತ್ರಕ್ಕೆ (MoU) ಸಹಿ ಹಾಕುವ ಕಾರ್ಯಕ್ರಮವು ಸೆ. 23ರಂದು ಆಯೋಜಿಸಲಾಯಿತು.
IQAC ಸಂಯೋಜಕ ರೊಬಿನ್ ಜೋಸೆಫ್ ಸೇರಾ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಆಗಮಿಸಿದ ಸರ್ವರಿಗೂ ಸ್ವಾಗತಿಸಿ, ಈ ಸಹಯೋಗವು ಕೇವಲ ಒಂದು ಒಪ್ಪಂದವಲ್ಲದೆ, ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳನ್ನು ಒದಗಿಸಲು, ಅವರ ವೃತ್ತಿಪರ ಕೌಶಲ್ಯಗಳನ್ನು ವೃದ್ಧಿಸಲು ಮತ್ತು ಜಾಗತಿಕ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ದಾರಿ ಮಾಡಿಕೊಡುವ ಮಹತ್ವದ ಹೆಜ್ಜೆ ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೆ LeAF Academy ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಶ್ರೀ. ಸಂಜೀವ್ ಸಿಂಗ್ ಮುಖ್ಯ ಅತಿಥಿಗಳಾಗಿ ಹಾಜರಾಗಿ, ACCA (Association of Chartered Certified Accountants) ಮತ್ತು CMA (Certified Management Accountant) ನ ಜಾಗತಿಕ ಮಾನ್ಯತೆ, ವೃತ್ತಿ ವ್ಯಾಪ್ತಿ ಹಾಗೂ ವಾಣಿಜ್ಯ ವಿದ್ಯಾರ್ಥಿಗಳಿಗೆ ದೊರೆಯುವ ಪ್ರಯೋಜನಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಅಲೆಕ್ಸ್ ಐವನ್ ಸಿಕ್ವೇರಾ ಅವರು ತರಗತಿ ಕಲಿಕೆ ಮತ್ತು ವಾಸ್ತವ ಜಗತ್ತಿನ ಅನುಭವಗಳ ನಡುವಿನ ಅಂತರವನ್ನು ಇಂತಹ ಸಹಯೋಗಗಳು ತುಂಬುವುದರ ಅಗತ್ಯತೆಯನ್ನು ವಿವರಿಸಿದರು. ಅಲ್ಲದೆ, ಸಮಾಜ ಮತ್ತು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ವಾಣಿಜ್ಯ ವಿದ್ಯಾರ್ಥಿಗಳ ಹೊಣೆಗಾರಿಕೆಯನ್ನು ನೆನಪಿಸಿದರು.
ಕಾರ್ಯಕ್ರಮದಲ್ಲಿ LeAF Academy ಸಂಸ್ಥೆಯ ಹಿರಿಯ ಮ್ಯಾನೇಜರ್ (ಬಿಸಿನೆಸ್ ಡೆವಲಪ್ಮೆಂಟ್) ಧೀರಜ್ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಗೌಡ ಅವರು ಉಪಸ್ಥಿತರಿದ್ದು, ಈ ಸಹಭಾಗಿತ್ವಕ್ಕೆ ಮಾರ್ಗದರ್ಶನ ಮತ್ತು ಬೆಂಬಲ ನೀಡಿದರು.
ಈ ಕಾರ್ಯಕ್ರಮವನ್ನು ದ್ವಿತಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ರೈನಾ ಜಾಯ್ಸ್ ಪಿಂಟೋ ನಿರೂಪಿಸಿದರು. ದ್ವೀತಿಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ರೋಹನ್ ಅವರು ನೆರೆದಿದ್ದ ಸರ್ವರಿಗೂ ಧನ್ಯವಾದ ಅರ್ಪಿಸಿದರು.