ಗೇರುಕಟ್ಟೆ: ಸೆ.26ರಂದು ಜುಮಾ ನಮಾಝಿನ ಬಳಿಕ ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಹಿದಾಯತುಸ್ಸಿಬಿಯಾನ್ ಮದರಸದಲ್ಲಿ ಕಳೆದ 15 ವರ್ಷಗಳಿಂದ ಮುಅಲ್ಲಿಮರಾಗಿ ಸೇವೆ ಸಲ್ಲಿಸುತ್ತಿರುವ ಬಹು ಯು.ಪಿ.ಹಸೈನಾರ್ ಸಅದಿ ರವರು ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳಲಿದ್ದು, ಅವರನ್ನು ಜಮಾಅತ್ ಆಡಳಿತ ಸಮಿತಿ ಮತ್ತು ಜಮಾಅತರಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಅಬೂಬಕ್ಕರ್ ಪೆಳತ್ತಲಿಕೆ, ಖತೀಬ ಮಹಮ್ಮದ್ ಮಿಸ್ಬಾಹಿ, ಅಬ್ದುಲ್ಲ ಕುಂಙಿ ದಾರಿಮಿ, ಪಿ.ಎಸ್.ಮದನಿ, ಇಲ್ಯಾಸ್ ಮದನಿ, ಪ್ರ.ಕಾರ್ಯದರ್ಶಿ ಅಬ್ದುಲ್ ಕರೀಮ್, ಅಬ್ದುಲ್ ಖಾದರ್ ಹಾಜಿ, ಅಬ್ದುಲ್ ಖಾದರ್ ಟಿಂಬರ್, ಅಬ್ದುಲ್ ಬಶೀರ್, ಉಸ್ಮಾನ್ ಹಾಜಿ, ಜಿ.ಡಿ. ಅಶ್ರಫ್, ಮಹಮ್ಮದ್ ಹನೀಫ್, ಅಬೂಸ್ವಾಲಿಹ್ , ಆದಂ ಹಾಜಿ ಬಿ.ಎಮ್., ಮಹಮ್ಮದ್ ಎನ್.ಎನ್., ರವೂಫ್ ಬಿ.ಕೆ., ಹಮೀದ್ ಜಿ.ಡಿ., ಇರ್ಫಾನ್ ಎಸ್., ಅಬ್ಬಾಸ್ ಬಿ., ಫಯಾಜ್ ಹಾಗೂ ಜಮಾಅತರು ಹಾಜರಿದ್ದರು.