ವೇಣೂರು: ಸಂತೃಪ್ತಿ ಹೋಟೆಲ್ ಬಳಿ ಎಸ್.ಎಸ್. ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಪ್ರಾರಂಭಿಸಲಿರುವ ಶ್ರೀಕೃಷ್ಣ ಮಾರ್ಟ್ ಸೆ. 29ರಂದು ಶುಭಾರಂಭಗೊಂಡಿತು. ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ
ಪ್ರತಾಪ್ ಸಿಂಹ ನಾಯಕ್ ನೆರವೇರಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ವೇಣೂರು ಎಸ್.ಎಸ್. ಕಾಂಪ್ಲೆಕ್ಸ್ ಮಾಲಕ ಮಹೇಶ್ ಯು. ಎಸ್., ವಿಭಾಗ ಕಾವ್ಯವಾಹಿಕಾ ರಾಷ್ಟ್ರಸೇವಿಕಾ ಸಮಿತಿ ಮಂಗಳೂರು ವಿಭಾಗದ ಗಿರಿಜಾ ಭಟ್, ವೇಣೂರು ವರ್ತಕರ ಸಂಘ ಅಧ್ಯಕ್ಷ ಕೆ. ಭಾಸ್ಕರ ಪೈ, ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ ಭಟ್ ಎಮ್., ಡಾ. ಶ್ರೀ ಹರಿ ದಂಪತಿಗಳು, ಅರವಿಂದ, ಶ್ರೀಗಣೇಶ್, ಮಹಮ್ಮದ್ ವೇಣೂರು, ಅರುಣ್ ಕ್ರಾಸ್ತಾ, ಸುಮಂಗಲ ಶ್ರೀಕೃಷ್ಣ ಮತ್ತು ಶ್ರೀಕೃಷ್ಣ ಕಾಂತಜೆ, ಶ್ರುತಿ ನಂದನ್ ಮತ್ತು ಡಾ. ನಂದಕಿಶೋರ್ ಬೈಕುಂಜೆ ಉಪಸ್ಥಿತರಿದ್ದರು. ಶ್ರುತಿ ಶ್ರವಣ್ ಮತ್ತು ಶ್ರವಣ್ ಕೆ.ಯವರು ಆಗಮಿಸಿದ ಅಥಿತಿ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

ಶ್ರೀ ಕೃಷ್ಣ ಮಾರ್ಟ್ ನಲ್ಲಿ ಸಿಗುವ ಸೌಲಭ್ಯ: ದಿನಬಳಕೆ ದಿನಸಿ ಸಾಮಾಗ್ರಿಗಳು, ಬೇಕರಿ ತಿಂಡಿಗಳು, ಶಾಲಾ ಮಕ್ಕಳ ಪುಸ್ತಕಗಳು, ಸ್ಟೇಶನರಿ ಸಾಮಾಗ್ರಿಗಳು, ಹಾರ್ಡ್ ವೇರ್ ಸಾಮಾಗ್ರಿಗಳು, ಪ್ಲಾಸ್ಟಿಕ್ ಸಾಮಾಗ್ರಿಗಳು, ಇತ್ಯಾದಿಗಳು ಮಿತದರದಲ್ಲಿ ದೊರೆಯುತ್ತದೆ.