ಬೆಳ್ತಂಗಡಿ: ಮಹಿಳೆಯರು ಉದ್ಯೋಗಕ್ಕಾಗಿ ಬೇರೆ ಬೇರೆ ಊರಿಗೆ ಹೋಗುವದಕ್ಕಿಂದ ಅವರ ಮನೆ ಸಮೀಪವೇ ಉದ್ಯೋಗ ಮಾಡಿ ಸಂಪಾದನೆ ಮಾಡಬೇಕು ಎಂಬ ಕನಸ್ಸನ್ನು ಕಂಡು ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಡಾ. ಹೇಮಾವತಿ ವಿ. ಹೆಗ್ಗಡೆಯವರು ಸಿರಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಇದರಿಂದ ಸಾವಿರಾರು ಮಹಿಳೆಯರಿಗೆ ಉದ್ಯೋಗ ದೊರಕ್ಕಿದ್ದು ಸಿರಿ ಸಂಸ್ಥೆ ಮಹಿಳೆಯರ ಪಾಲಿನ ಅಶಾಕಿರಣ ಎಂದು ಉಜಿರೆ ಎಸ್. ಡಿ. ಎಂ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಎನ್. ಹೇಳಿದರು.
ಅವರು ಸೆ. 27ರಂದು ಬೆಳ್ತಂಗಡಿ ಸಿರಿ ಇಂಡಷ್ಡಿಯಲ್ ಪಾರ್ಕ್ ಕಟ್ಟಡದಲ್ಲಿ ದಸರಾ, ದೀಪಾವಳಿ ಪ್ರಯುಕ್ತ ನಡೆಯುವ ವಿಜಯವಾಣಿ ವಿಜಯೋತ್ಸವದ ಕೂಪನ್ ಬಿಡುಗಡೆ ಮಾಡಿ ಮಾತನಾಡಿ ಒಂದು ಸಂಸ್ಥೆ ಬೆಳೆಯಬೆಕಾದರೆ ಸಿಬ್ಬಂದಿಗಳ ಶ್ರಮ ಅಗತ್ಯವಾಗಿದ್ದು ಇದನ್ನು ಸಿರಿ ಸಿಬ್ಬಂದಿಗಳು ತೋರಿಸಿಕೊಟ್ಟಿದ್ದಾರೆ. ಇಂದು ಮಳಿಗೆಗಳ ಮೂಲಕ ಗ್ರಾಹಕರಿಗೆ ಅದೃಷ್ಟ ಬಹುಮಾನವನ್ನು ಗೆಲ್ಲುವ ಅವಕಾಶ ನೀಡಿದೆ. ಎಂದರು. ಸಿರಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಉದ್ಯಮಿ ರಾಜೇಶ್ ಪೈ ಮಾತನಾಡಿ ಸಿರಿ ಸಂಸ್ಥೆಯು ಗುಣಮಟ್ಟದ ಉತ್ಪನ್ನಗಳನ್ನು ಜನರಿಗೆ ನೀಡುವ ಮೂಲಕ ಮನೆಮಾತಾಗಿದೆ. ಇದರಿಂದಾಗಿ ಸಂಸ್ಥೆ ಬೆಳೆದಿದ್ದು ಸಾವಿರಾರು ಮಹಿಳೆಯರಿಗೆ ಉದ್ಯೋಗ ಸಿಗುತ್ತಿದೆ. ಸಿಬ್ಬಂದಿಗಳು ವ್ರುತ್ತಿಯ ಜೊತೆ ಸ್ವಚ್ಚಗೆ ಆದ್ಯತೆ ನೀಡಬೇಕು ಎಂದರು.
ಬಳಂಜ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ರತ್ನರಾಜ್ ಜೈನ್ ಮಾತನಾಡಿ ಸಿರಿ ಉತ್ಪನ್ನಗಳ ಗುಟಮಟದಿಂದ ಜನರು ಅಕರ್ಷಿತರಾಗಿದ್ದಾರೆ ಎಂದರು. ಸಿರಿ ಇಂಡಸ್ಟ್ರಿಯಲ್ ಪಾರ್ಕ್ ನ ವ್ಯವಸ್ಥಾಪಕ ನಿರ್ದೇಶಕ ಕೆ. ಎನ್.ಜನಾರ್ದನ್ ಅದ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರಿಗೆ ಉತ್ತಮ ಅವಕಾಶವನ್ನು ಸಿರಿ ಸಂಸ್ಥೆ ನೀಡುತ್ತಿದೆ. ಸಂಸ್ಥೆಯ ಅದ್ಯಕ್ಷರು ಡಾ ಡಿ ವೀರೇಂದ್ರ ಹೆಗ್ಗಡೆಯವರು ಮತ್ತು ಸಿರಿ ಸಂಸ್ಥೆ ಕನಸನ್ನು ಕಂಡ ಡಾ ಹೇಮಾವತಿ ವಿ ಹೆಗ್ಗಡೆಯವರು ವಿಷೇಷ ಅಸಕ್ತಿ ವಹಿಸಿ ಸಂಸ್ಥೆಯನ್ನು ಬೆಳೆಸುತ್ತಿದ್ದಾರೆ. ವಿಶಾಲವಾದ ಕಟ್ಟಡದ ಜೊತೆ ಇನ್ನಷ್ಟು ಉತ್ಪನ್ನಗಳ ಉತ್ಪಾದನೆಗೆ ಮಾಡುವಂತೆ ತಿಳಿಸಿದ್ದು ಇದರಿಂದ ಇನ್ನಷ್ಟು ಮಹಿಳೆಯರಿಗೆ ಉದ್ಯೋಗ ಸಿಗಲಿದೆ. ಎಲ್ಲಾ ಸಿಬ್ಬಂದಿಗಳು ಕಠಿನ ಶ್ರಮ ಪಟ್ಟು ಸಿರಿ ಸಂಸ್ಥೆಯನ್ನು ಬೆಳೆಸುತ್ತಿದ್ದಾರೆ ಎಂದರು.ಪ್ರತಿಯೊಂದು ಸಿರಿ ಉತ್ಪನ್ನ ಖರೀದಿಸಿದರೆ ನೇರವಾಗಿ ಮಹಿಳೆಯರಿಗೆ ಪ್ರಯೋಜನವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಸಿರಿ ಸಿಬ್ಬಂದಿಗಳನ್ಬು ಗೌರವಿಸಲಾಯಿತು. ಅಯುದ ಪೂಜೆ ನಡೆಯಿತು. ಸಿರಿ ಸಂಸ್ಥೆಯ ಆಡಳಿತ ಮತ್ತು ಲೆಕ್ಕಪತ್ರ ವಿಭಾಗದ ಮುಖ್ಯ ನಿರ್ವಹಣಾದಿಕಾರಿ ಪ್ರಸನ್ನ ಯು ಸ್ವಾಗತಿಸಿ, ಗೋದಾಮು ವಿಭಾಗದ ಜಿ ಎಂ ಜೀವನ್ ಕಾರ್ಯಕ್ರಮ ನಿರೂಪಿಸಿದರು. ಪತ್ರಿಕೆಯ ವರದಿಗಾರ ಮನೋಹರ್ ಬಳಂಜ ಪ್ರಸ್ತಾವಿಕ ಮಾತನಾಡಿದರು. ಮಾರುಕಟ್ಟೆ ವಿಭಾಗದ ಜನರಲ್ ಮ್ಯಾನೇಜರ್ ವಿನ್ಸೆಂಟ್ ಲೋಬೋ ವಂದಿಸಿದರು.