ಬೆಳ್ತಂಗಡಿ: ಸಂತ ತೆರೇಸಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸೆ. 25ರಂದು ಧರ್ಮಸ್ಥಳ ಗ್ರಾಮೀಣೋದ್ಯೋಗ ಸಂಸ್ಥೆ ಸಿರಿಯ ನೂತನ ಉದ್ಯಮ ಘಟಕ ಬೆಳ್ತಂಗಡಿ ಸಂಸ್ಥೆಗೆ ಭೇಟಿ ನೀಡಿ, ಅಲ್ಲಿನ ಉದ್ಯಮ ಕಾರ್ಯಾಚರಣೆಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಲಾಯಿತು.
ಸಿರಿ ಗ್ರಾಮೀಣೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ಜೀವನ್ ಅವರು ಸಂಸ್ಥೆಯ ಕಾರ್ಯ ವೈಖರಿಯ ಕುರಿತು ಮಾಹಿತಿಯನ್ನು ನೀಡಿದರು. ಅಲ್ಲಿ ಕಾರ್ಯಾಚರಿಸುತ್ತಿರುವಂತಹ ಬಟ್ಟೆ ಉದ್ಯಮ, ಫಿನೈಲ್ ತಯಾರಿಕಾ ಘಟಕ, ಅಗರಬತ್ತಿ ತಯಾರಿಕಾ ಘಟಕ, ಎಂಬ್ರಾಯ್ಡರಿ ಮೊದಲಾದ ಘಟಕಗಳ ಕಾರ್ಯನಿರ್ವಹಣೆ, ಕಾರ್ಮಿಕರು ಕಾರ್ಮಿಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳು ,ಉದ್ಯೋಗಾವಕಾಶಗಳು, ಲಾಭಾಂಶ ನಷ್ಟದ ಕುರಿತು ಪ್ರಾಯೋಗಿಕ ಪ್ರತ್ಯಕ್ಷಣೆಯ ಮೂಲಕ ಸವಿಸ್ತಾರವಾಗಿ ತಿಳಿಸಿದರು. ವಿದ್ಯಾರ್ಥಿಗಳು ಪೂರ್ಣ ಪ್ರಯೋಜನವನ್ನು ಪಡೆದರು. ಕಾಲೇಜಿನ ಪ್ರಾಂಶುಪಾಲ ಭಗಿನಿ ಮೋಲಿ ಡಿಕುನ್ನ ಹಾಗೂ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.