ಕುತ್ಲೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ, ನಾರಾವಿ ವಲಯದ ಕುತ್ಲೂರು ದರ್ಖಾಸು ಎಂಬಲ್ಲಿ ಸುಶೀಲ ಅವರ ವಾತ್ಸಲ್ಯ ಮನೆ ಕ್ಷೇತ್ರದಿಂದ ಮಂಜೂರಾಗಿದ್ದು ಮನೆಯ ಗೃಹಪ್ರವೇಶ ಮತ್ತು ಮನೆ ಹಸ್ತಾಂತರ ಕಾರ್ಯಕ್ರಮವನ್ನು ಕ್ಷೇತ್ರದ ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್ ಹಾಗೂ ಮೈತ್ರಿ ಅವರಿಂದ ಸುಶೀಲ ಅವರಿಗೆ ಹಸ್ತಾಂತರಿಸಿದರು.
ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್, ಕುತ್ಲೂರು ಪರುಷಗುಡ್ಡೆ ಜಿನ ಬಸದಿ ಅಧ್ಯಕ್ಷ ಪಾರ್ಶ್ವನಾಥ ಬಂಗ ಸಾಲ್ಯೂರು ಗುತ್ತು, ನಾರಾವಿ ವಲಯ ಧರ್ಮಸ್ಥಳ ಸತ್ಯದರ್ಶನ ಸಮಿತಿ ಸಂಚಾಲಕ ವಸಂತ ಭಟ್ ಮತ್ತು ವಿನಯ ಕುಮಾರ್ ಹೆಗ್ಡೆ, ಜಿ.ಕೆರೆ ಕೇಂದ್ರ ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರ, ಧರ್ಮಸ್ಥಳ ಜ್ಞಾನ ವಿಕಾಸ ಕೇಂದ್ರ ವಿಭಾಗದ ನಿರ್ದೇಶಕ ವಿಠಲ ಸಾಲಿಯಾನ್,
ತಾಲೂಕು ಜ್ಞಾನ ವಿಕಾಸ ಕೇಂದ್ರದ ಯೋಜನಾಧಿಕಾರಿ ಅಮೃತ ಶೆಟ್ಟಿ ಮತ್ತು ವಲಯದ ಗಣ್ಯರಾದ ಜಯಂತ್ ಕೋಟ್ಯಾನ್ ಮರೋಡಿ, ಶಶಿಕಾಂತ ಆರಿಗ ಕುತ್ಲೂರು, ಉದಯ ಕುಮಾರ್ ಹೆಗ್ಡೆ ನಾರಾವಿ, ರಾಜು ಶೆಟ್ಟಿ ಕೊಕ್ರಾಡಿ, ವಿಶ್ವನಾಥ ಶೆಟ್ಟಿ ಸುಳ್ಕೇರಿ, ಡಾಕಯ್ಯ ಪೂಜಾರಿ, ತುಂಗಪ್ಪ ಪೂಜಾರಿ, ಕನಕವರ್ಮ ಜೈನ್, ಕೃಷ್ಣಪ್ಪ ಪೂಜಾರಿ, ಶಿವಣ್ಣ ಶೆಟ್ಟಿ ಮತ್ತು ಯಶೋಧಾ, ರಾಜಶ್ರೀ ಕುತ್ಲೂರು ಹಾಗೂ ಸಂತೋಷ್ ಮತ್ತು ಏಕನಾಥ ಅಧ್ಯಕ್ಷರು, ಪ್ರಗತಿ ಬಂಧು ಒಕ್ಕೂಟ ಎ/ಬಿ ಕುತ್ಲೂರು, ವಾರಿಜಾ ಕೊಕ್ರಾಡಿ, ರಾಜು ಪೂಜಾರಿ ಮರೋಡಿ ಬಿ. ಹಾಗೂ ವಲಯದ ಶೌರ್ಯ ವಿಪತ್ತು ಘಟಕ ಸಂಯೊಜಕ ದಿನೇಶ್ ಶೆಟ್ಟಿ ಮತ್ತು ಘಟಕದ ಸದಸ್ಯರುಗಳು, ಅಧ್ಯಕ್ಷರು/ಮುಖ್ಯೋಪಾಧ್ಯಾಯರು /ಪದಾಧಿಕಾರಿಗಳು ಸ.ಉ.ಹಿ.ಪ್ರಾ.ಶಾಲೆ ಕುತ್ಲೂರು, ಅಧ್ಯಕ್ಷರು/ ಪದಾಧಿಕಾರಿಗಳು ಹಾಲು ಉತ್ಪಾದಕರ ಸಹಕಾರ ಸಂಘ ಕುತ್ಲೂರು, ಮತ್ತು ನಾರಾವಿ ವಲಯದ ಎಲ್ಲಾ ಸೇವಾ ಪ್ರತಿನಿಧಿ ಹಾಗೂ V L E ಗಳು ಮತ್ತು ವಲಯದ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರು/ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ/ ಸದಸ್ಯೆಯರು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿ ಗಣ್ಯರನ್ನು ಗುರುವಾಯನಕೆರೆ ಕಚೇರಿ ಯೋಜನಾಧಿಕಾರಿ ಅಶೋಕ್ ಆರ್. ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜನೆಯನ್ನು ನಾರಾವಿ ವಲಯ ಮೇಲ್ವಿಚಾರಕಿ ವಿಶಾಲ ಕೆ. ಅವರು ನಿರ್ವಹಿಸಿ, ಕುತ್ಲೂರು ಕರುಣಾಕರ್ ಜೈನ್ ವಂದನಾರ್ಪಣೆ ಸಲ್ಲಿಸಿದರು.