ಗುರುವಾಯನಕೆರೆ: ಪಣೆಜಾಲಿನಲ್ಲಿರುವ ಕರ್ನಾಟಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿಯವರ ಕಚೇರಿಯಲ್ಲಿ ಆಯುಧ ಪೂಜೆಯು ಸೆ.26ರಂದು ನೆರವೇರಿತು.
ಇಲಾಖೆಯ ಎಲ್ಲಾ ವಾಹನಗಳಿಗೆ ಕುತ್ಯಾರು ದೇವಸ್ಥಾನದ ಪುರೋಹಿತ ಗೋಪಾಲಕೃಷ್ಣ ಉಡುಪ ಪೂಜೆಯನ್ನು ಸಲ್ಲಿಸಿದರು.
ಅರಣ್ಯ ಅಧಿಕಾರಿಗಳು ತಮ್ಮ ವೃತ್ತಿ ಉಪಕರಣಗಳನ್ನು ಸ್ವಚ್ಛಗೊಳಿಸಿ, ಪಾಲಿಶ್ ಮಾಡಿ, ಕುಂಕುಮ-ಅರಿಶಿನ ಹಚ್ಚಿ, ಹೂವುಗಳಿಂದ ಅಲಂಕರಿಸಿ ನಂತರ ಪೂಜೆ ಸಲ್ಲಿಸಿದರು.
ವರ್ಷಪೂರ್ತಿ ಖಾಕಿ ಧರಿಸುತ್ತಿದ್ದ ಇವರು ಆಯಧ ಪೂಜೆ ಪ್ರಯುಕ್ತ ಸಾಂಪ್ರದಾಯಿಕ ಬಿಳಿ ಪಂಚೆ, ಶರ್ಟ್, ಶಲ್ಯ ಹೊದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಸಂಭ್ರಮಿಸಿದರು.
ವಲಯ ಅರಣ್ಯಾಧಿಕಾರಿ ಲೋಕೇಶ್ ಹೆಚ್.ಎನ್, ಡಿ.ಆರ್.ಎಫ್.ಒ ಅಶೋಕ್, ಸಿಬ್ಬಂದಿಗಳಾದ ಶೇಖರ್, ಚೇತನ್, ಪ್ರಮೀಳ, ಭಾರತಿ ಹಾಜರಿದ್ದರು.