ಬೆಳ್ತಂಗಡಿ: ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ಮುಚ್ಚಿದ ಕೋರ್ಟ್ ನಲ್ಲಿ 183 ಬಿ ಎನ್ ಎಸ್ ಎಸ್ ರಡಿ ಮುಚ್ಚಿದ ಕೋರ್ಟ್ ನಲ್ಲಿ ತನ್ನ ಸ್ವ ಇಚ್ಛಾ ಹೇಳಿಕೆ ನೀಡಿ ವಾಪಾಸಾಗಿದ್ದಾರೆ.
ಈ ಹಿಂದೆ ಆರೋಪಿಯನ್ನು ತೆರೆದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗ ತನಗೆ ನ್ಯಾಯಾಲಯದ ಮುಂದೆ ಹೇಳಲು ತುಂಬಾ ಸಂಗತಿಗಳು ಇವೆ ಎಂದು ನಿವೇದಿಸಿಕೊಂಡ ಹಿನ್ನಲೆಯಲ್ಲಿ ಈ ಹೇಳಿಕೆಯನ್ನು ಪಡೆಯಲಾಗಿದೆ. ಸೆ.23ರರಂದು ಭಾಗಶಃ ಹೇಳಿಕೆ ಪಡೆಯಲಾಗಿತ್ತು. ಇಂದು (ಸೆ.25)ಆರೋಪಿಯ ಮತ್ತಷ್ಟು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಮತ್ತು ಸೆ.27ಕ್ಕೆ ಮತ್ತಷ್ಟು ಹೇಳಿಕೆ ದಾಖಲಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಇವತ್ತು ಆರೋಪಿ ಚಿನ್ನಯ್ಯನನ್ನು ಶಿವಮೊಗ್ಗ ಪೊಲೀಸರು ಬೆಳಗ್ಗೆ 11ಗಂಟೆಗೆ ಬೆಳ್ತಂಗಡಿ ಕೋರ್ಟ್ ಗೆ ಕರೆ ತಂದಿದ್ದರು, ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಆತನನ್ನು ಮುಚ್ಚಿದ ಕೋರ್ಟ್ ನಲ್ಲಿ ಹೇಳಿಕೆ ನೀಡಲು ಕರೆದೊಯ್ದು,ನಂತರ 2.15ಕ್ಕೆ ಊಟಕ್ಕೆ ಬ್ರೇಕ್ ನೀಡಲಾಗಿತ್ತು. ನಂತರ ಮಧ್ಯಾಹ್ನ 3 ಗಂಟೆಗೆ ಮತ್ತೆ ಮುಚ್ಚಿದ ಕೋರ್ಟ್ ನಲ್ಲಿ ಹೇಳಿಕೆ ನೀಡುವ ಪ್ರಕ್ರಿಯೆ ಆರಂಭವಾಗಿತ್ತು.
ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಹೆಚ್ಚುವರಿ ವ್ಯಾವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶರಾದ ವಿಜಯೇಂದ್ರರವರ ಮುಂದೆ ಹಾಜರಾಗಿ ಹೇಳಿಕೆ ನೀಡಿರುವ ಚಿನ್ನಯ್ಯನನ್ನು ಪೊಲೀಸರು ಶಿವಮೊಗ್ಗ ಜೈಲಿಗೆ ವಾಪಾಸ್ ಕರೆದುಕೊಂಡು ಹೋಗಿದ್ದಾರೆ.
Home Uncategorized ಬುರುಡೆ ಪ್ರಕರಣ-ಆರೋಪಿ ಚಿನ್ನಯ್ಯ ಬೆಳ್ತಂಗಡಿ ಮುಚ್ಚಿದ ಕೋರ್ಟ್ ನಲ್ಲಿ ಹೇಳಿಕೆ ಮುಗಿಸಿ ವಾಪಾಸ್- ಸೆ.27ಕ್ಕೆ ಮತ್ತೆ...