ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ಸಹಯೋಗದಲ್ಲಿ ಬಜಿರೆ ಒಕ್ಕೂಟದ ತ್ರೈಮಾಸಿಕ ಸಭೆ ಸೆ. 21ರಂದು ಬಜಿರೆ ಬತ್ತಾರು ಸಮುದಾಯ ಭವನದಲ್ಲಿ ಒಕ್ಕೂಟದ ಅಧ್ಯಕ್ಷ ಗಿರೀಶ್ ಕೆ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಒಕ್ಕೂಟದ ಜವಾಬ್ದಾರಿ ತಂಡವಾದ ಕೃತಿ ಮತ್ತು ಧರ್ಮಶ್ರೀ ಸಂಘದ ಸದಸ್ಯರು ಒಕ್ಕೂಟದ ಅಧ್ಯಕ್ಷರೊಂದಿಗೆ ದೀಪ ಪ್ರಜ್ವಲನೆಯ ಮೂಲಕ ಸಭೆಯು ಆರಂಭವಾಯಿತು. ಸಂಘದ ವರದಿಯನ್ನು ಸದಸ್ಯ ದಾಮೋದರ ಹೆಗ್ಡೆ ಮತ್ತು ಪದ್ಮಿನಿ ಓದಿದರು. ತಾಲೂಕಿನ ಯೋಜನಾಧಿಕಾರಿ ಅಶೋಕ್ ಬಿ. ಮಾತನಾಡಿ ಯೋಜನೆ ಬೆಳೆದು ಬಂದ ದಾರಿಯ ಬಗ್ಗೆ ಮತ್ತು ಕೇಂದ್ರ ಸರ್ಕಾರದಲ್ಲಿ ದೊರಕುವ ಸೌಲಭ್ಯ ಬಗ್ಗೆ, ಪ್ರಗತಿ ರಕ್ಷಾ ಕವಚ ಹಾಗೂ ವಿಪತ್ತು ನಿರ್ವಹಣಾ ತಂಡ ರಚನೆ ಹಾಗೂ ಇನ್ನೂ ಅನೇಕ ಯೋಜನೆಗೆ ಸಂಬಂಧಪಟ್ಟ ಎಲ್ಲಾ ವಿಚಾರಗಳನ್ನು ತಿಳಿಸಿದರು.

ಸಭೆಯಲ್ಲಿ ವಲಯದ ಮೇಲ್ವಿಚಾರಕಿ ಶಾಲಿನಿ ಉಪಸ್ಥಿತರಿದ್ದರು. ಒಕ್ಕೂಟದ ಅಧ್ಯಕ್ಷ ಗಿರೀಶ್ ಕೆ. ಸಭೆಯನ್ನು ಉದ್ಧೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಸೇವಾಪ್ರತಿನಿಧಿ ರೂಪ, ಒಕ್ಕೂಟದ ಪದಾಧಿಕಾರಿಗಳಾದ ಜನಾರ್ಧನ ಪೂಜಾರಿ, ಪ್ರಶಾಂತ್, ವಸಂತಿ, ಸವಿತಾ ಮತ್ತು ಪೂಜಾ ಉಪಸ್ಥಿತರಿದ್ದರು. ಗುರುದತ್ ಹೆಗ್ಡೆ ಸ್ವಾಗತಿಸಿ, ಸುಚಿತ ಧನ್ಯವಾದವಿತ್ತರು.