ಕೊಲ್ಲಿ: ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದಲ್ಲಿ ಸೆ. 22ರಿಂದ ಅ.2ರ ತನಕ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಗೌರವ ಡಾ. ಮಾರ್ಗದರ್ಶನದಲ್ಲಿ ಜರುಗಲಿದೆ.
ಪ್ರತಿದಿನ ರಂಗ ಪೂಜೆ ಮತ್ತು ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಲಿದೆ. ಸೆ. 30ರಂದು ಪೂರ್ವಾಹ್ನ ಗಂಟೆ 8:30ರಿಂದ ಶ್ರೀ ದೇವಿಯ ಪ್ರೀತ್ಯರ್ಥವಾಗಿ ದೇವಳದ ವತಿಯಿಂದ ಚಂಡಿಕಾ ಹೋಮ ಮತ್ತು ಅ.1ರಂದು ಕಲ್ಕುಡ – ಕಲ್ಲುರ್ಟಿ ದೈವಗಳ ನೇಮೋತ್ಸವ ಜರಗಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ ದಾಸಪ್ಪ ಗೌಡ ಕಾಂಜಾನು ಮತ್ತು ಗೌರವಾಧ್ಯಕ್ಷ ಕೆ ಸತೀಶ್ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ: ಸೆ.26ರಂದು ಮೆಲೋಡಿಸ್ ನಾವುರ ಇದರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ ದಾಸಪ್ಪ ಗೌಡ ಕಾಂಜಾನು ಮತ್ತು ಗೌರವಾಧ್ಯಕ್ಷ ಕೆ ಸತೀಶ್ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಲಾವಿದರಿಂದ ಭಕ್ತಿ ಸಂಗೀತ ರಸಮಂಜರಿ ಹಾಗೂ ಹಾಸ್ಯಮಯ ಕಾರ್ಯಕ್ರಮ, ಸೆ. 27ರಂದು ಜ್ಯೋತಿ ವಿಜಯ ಗೌಡ ಕಿಲ್ಲೂರು ಪ್ರಾಯೋಜಕತ್ವದಲ್ಲಿ ಪ್ರೀತಿ ವಿ. ಜೆ. ಕಿಲ್ಲೂರು ಹಾಗೂ ಬಳಗದವರಿಂದ ಭರತನಾಟ್ಯ ಕಾರ್ಯಕ್ರಮ. ಆ.2ರಂದು ಶ್ರೀ ದುರ್ಗಾಪರಮೇಶ್ವರಿ, ದುರ್ಗಾದೇವಿ ಯಕ್ಷಗಾನ ಮಂಡಳಿ ಕೊಲ್ಲಿ ಅವರಿಂದ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಬಪ್ಪನಾಡು ಕ್ಷೇತ್ರ ಮಜಾಕ್ಕೆ ಯಕ್ಷಗಾನ ಬಯಲಾಟ ಜರುಗಲಿದೆ.