ಬೆಳ್ತಂಗಡಿ: ಗುರುವಾಯನಕೆರೆಯ ಬಸ್ ನಿಲ್ದಾಣದ ಬಳಿ ಇರುವ ಶ್ರೀ ವರದ ಪಾಂಡುರಂಗ ವಿಠಲ ಮಂದಿರದ ಕಾಣಿಕೆ ಡಬ್ಬಿಯ ಹಣವನ್ನು ಕೀಲುಗಳ (RIBIT OF HINGES) ಮೊಳೆಗಳನ್ನು ತುಂಡರಿಸಿ ಚಿಲ್ಲರೆ ಹಣ ಕಳವು ಮಾಡಿರುವುದು ಕಂಡು ಬಂದಿದೆ.
ಸ್ವಲ್ಪ ದಿನದ ಹಿಂದೆ ಕಾಣಿಕೆ ಡಬ್ಬಿಯ ಹಣವನ್ನು ಆಡಳಿತ ಮಂಡಳಿಯವರು ತೆಗೆದಿರುವುದರಿಂದ ಹೆಚ್ಚಿನ ಹಣ ಕಳವು ಮಾಡಲು ಸಾಧ್ಯವಾಗಿಲ್ಲ ಎಂದು ಆಡಳಿತ ಅಧ್ಯಕ್ಷ ವಿಶ್ವೇಶ್ ಕಿಣಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಮತ್ತು ಆರಕ್ಷಕ ಠಾಣೆಗೆ ಇನ್ನಷ್ಟೇ ಮಾಹಿತಿ ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ.