ಬೆಳ್ತಂಗಡಿ: 9-12-2024ರಂದು ಮಧ್ಯಾಹ್ನ 2.35ರ ಸುಮಾರಿಗೆ ರಾಜೀವಿ ಎಂಬ ಮಹಿಳೆಯ ಕುತ್ತಿಗೆಯಲ್ಲಿದ್ದ 32ಗ್ರಾಂ ತೂಕದ ಚಿನ್ನದ ಕರಿಮಣಿ ಎಳೆದುಕೊಂಡು ಗುಡ್ಡಕ್ಕೆ ಓಡಿ ತಪ್ಪಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ಆರೋಪಿ ಡೆಂಬುಗ ಗಿರಿ ಗುಡ್ಡೆಯ ನಿವಾಸಿ ಉಮೇಶ್ ಗೌಡನಿಗೆ 3ವರ್ಷ ಕಠಿಣ ಕಾರಾಗೃಹ ಶಿಕ್ಷೆ ಪ್ರಕಟವಾಗಿದೆ.
ಬೆಳ್ತಂಗಡಿಯ ಪ್ರಧಾನ ಸಿಜೆ, ಜೆ.ಎಂ.ಎಫ್. ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸಂದೇಶ್ ಕೆ ಯವರು ಆರೋಪಿ ಉಮೇಶ್ ಗೌಡ ಎಸಗಿರುವ ಅಪರಾಧಗಳ ಪೈಕಿ ಬಿಎನ್ ಎಸ್ 126(2), 309(5), 309(6), ರಡಿ ಅಪರಾಧ ಸಾಬೀತಾದ ನಿಟ್ಟಿನಲ್ಲಿ ಆರೋಪಿಯನ್ನು ದೋಷಿ ಎಂದು ಪರಿಗಣಿಸಿ 19-09-2025ರಂದು ತೀರ್ಪು ನೀಡಿದ್ದಾರೆ.
ಬಿಎನ್ ಎಸ್ ಎಸ್ 309(6) ರಡಿ 3 ವರ್ಷ ಕಠಿಣ ಕಾರಾಗೃಹ ಹಾಗೂ 5000 ದಂಡ ಶಿಕ್ಷೆ, ಬಿ ಎನ್ ಎಸ್ ಎಸ್ 309(5)ರಡಿ 3ವರ್ಷ ದಂಡ,5000 ಸಾವಿರ ದಂಡ ಹಾಗೂ ತಪ್ಪಿದ್ರೆ 6ತಿಂಗಳು ಹೆಚ್ಚುವರಿ ಶಿಕ್ಷೆ, 126(2) ರಡಿ 1 ತಿಂಗಳು ಕಾರಾಗೃಹ ಮತ್ತು 500 ರೂಪಾಯಿ ದಂಡ, ಹಾಗೂ 309(3)ರಡಿ 10,000ಪರಿಹಾರ ನೀಡುವಂತೆ ಸೂಚಿಸಲಾಗಿದೆ.
ಬಿ.ಎನ್.ಎಸ್ 2023ರಡಿ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯದಲ್ಲಿ ಶಿಕ್ಷೆಯಾಗಿ ತೀರ್ಪುಗೊಂಡ ಮೊದಲ ಪ್ರಕರಣ ಇದಾಗಿದ್ದು, ಪ್ರಕರಣದಲ್ಲಿ ದೋಷಾರೋಪಣಾ ಪಟ್ಟಿಯನ್ನು ಸರ್ಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪರಿಶೀಲಿಸಿದ್ರೆ, ವೃತ್ತ ನಿರೀಕ್ಷಕ ಸುಬ್ಬಾಪುರಮಠ ಅವರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸರ್ಕಾರಿ ಸಹಾಯಕ ಅಭಿಯೋಜಕಿ ಆಶಿತ ಎಂ.ಎ. ಅವರು ವಾದ ಮಂಡಿಸಿದರು. ಆರೋಪಿ ಮೇಲ್ಮನವಿ ಸಲ್ಲಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.