ಬೆಳ್ತಂಗಡಿ: ಸೆ.21ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಆಯೋಜಿಸಲ್ಪಟ್ಟಿರುವ ಎಸ್.ಡಿ.ಎಂ ವಿದ್ಯಾ ಸಂಸ್ಥೆಗಳ ಹಿರಿಯ ವಿದ್ಯಾರ್ಥಿಗಳ ಬೃಹತ್ ಸಮ್ಮಿಲನ 2025 ಕಾರ್ಯಕ್ರಮದ ಪೂರ್ವಭಾವಿಯಾಗಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಧರ್ಮಸ್ಥಳ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಚರ್ಚೆ ಮತ್ತು ಸಮಾಲೋಚನೆಯನ್ನು ನಡೆಸಿದರು.
ಕಳೆದ 7-8 ದಶಕಗಳಿಂದ ಪ್ರೈಮರಿ, ಹೈಸ್ಕೂಲು, ಪದವಿ ಕಾಲೇಜು, ಐಟಿಐ, ಪಾಲಿಟೆಕ್ನಿಕು, ಕಾನೂನು ಪದವಿ, ನರ್ಸಿಂಗ್, ಇಂಜಿನಿಯರಿಂಗ್, ಆಯುರ್ವೇದ, ನ್ಯಾಚುರಪತಿ, ಯೋಗ, ಹೋಮಿಯೋಪತಿ, ವೈದ್ಯಕೀಯ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದು , ಈ ಎಲ್ಲಾ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿರುವ ಸಾವಿರಾರು ವಿದ್ಯಾರ್ಥಿಗಳು ಸೆ.21ರ ಸಮ್ಮಿಲನದಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪೂರ್ವಭಾವಿ ಮೀಟಿಂಗ್ನಲ್ಲಿ ವಿಶ್ರಾಂತ ಎಸ್.ಪಿ. ಭಾಸ್ಕರ್ ಒಕ್ಕಲಿಗ, ಸಾಮಾಜಿಕ ಹೋರಾಟಗಾರ ಮಾಳ ಹರ್ಷೇಂದ್ರ ಜೈನ್, ಬ್ಯಾಂಕಿನ ವಿಶ್ರಾಂತ ಹಿರಿಯ ಅಧಿಕಾರಿ ನೇಮಿರಾಜ್, ದಿವಾಕರ್ ಭಟ್, ಇಂಡಸ್ಟ್ರಿ ಲಿಸ್ಟ್ ಪುಷ್ಪರಾಜ್ ನೆಲ್ಲಿಕ್ಕಾರು, ಹಿರಿಯ ವಿದ್ಯಾರ್ಥಿಗಳಾದ ಮಾಜಿ ಬ್ಯಾಂಕ್ ಉದ್ಯೋಗಿ ವಸಂತರಾಜ್, ಹಿರಿಯ ಚಾರ್ಟೆಡ್ ಅಕೌಂಟೆಂಟ್ ಕಲಾದಾರ್ ಸರಳಾಯ, ಸರಳಾಯ ಮತ್ತು ಬ್ಯಾಂಕ್ ಉದ್ಯೋಗಿ ನಾಗಾರ್ಜುನ ಉಪಸ್ಥಿತರಿದ್ದರು.
ಸಿದ್ಧವನ,ರತ್ನಮಾನಸ ಭೇಟಿಗೂ ನಿರ್ಧಾರ ಹಾಗೆಯೇ ಇನ್ನೊಂದು ಅವಕಾಶ ಎಂಬಂತೆ ಸಿದ್ದವನ ಗುರುಕುಲ ಮತ್ತು ರತ್ನಮಾನಸ ವಿದ್ಯಾರ್ಥಿ ನಿಲಯದಲ್ಲಿದ್ದ ಹಲವಾರು ಹಳೇ ವಿದ್ಯಾರ್ಥಿ ಗಳು ಬೆಳಗ್ಗೆ 11 ಗಂಟೆಗೆ ಸಿದ್ದವನ ಗುರುಕುಲ ಮತ್ತು ರತ್ನಮಾನಸದಲ್ಲಿ ಸೇರುವ ಬಗ್ಗೆಯೂ ಸಭೆಯಲ್ಲಿ ಅಭಿಪ್ರಾಯಪಟ್ಟರು.