ಬೆಳ್ತಂಗಡಿ: ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ 183 ಬಿ ಎನ್ ಎಸ್ ಎಸ್ ರಡಿ ಒಂದು ಹಂತದ ಹೇಳಿಕೆ ನೀಡಿ ವಾಪಾಸಾಗಿದ್ದಾರೆ.
ಹಿಂದಿನ ಕಲಂ 164 ದಂಡ ಪ್ರಕ್ರಿಯೆ ಸಂಹಿತೆ, ಈಗಿನ ಕಲಂ 183 ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರಡಿಯಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿ ವಾಪಾಸಾಗಿದ್ದಾರೆ. ಮತ್ತೆ ಸೆ.23ರರಂದು ಹಾಜರಾಗಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಸೆ.18ರಂದು ಆರೋಪಿ ಚಿನ್ನಯ್ಯನನ್ನು ಶಿವಮೊಗ್ಗ ಪೊಲೀಸರು ಬೆಳ್ತಂಗಡಿ ಕೋರ್ಟ್ ಗೆ ಕರೆ ತಂದಿದ್ದರು.
ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಹೆಚ್ಚುವರಿ ವ್ಯಾವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶರಾದ ವಿಜಯೇಂದ್ರ ಮುಂದೆ ಹಾಜರಾಗಿ ಒಂದು ಹಂತದ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಚಿನ್ನಯ್ಯನನ್ನು ಮತ್ತೆ ಪೊಲೀಸರು ಶಿವಮೊಗ್ಗ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ.