ಬೆಳ್ತಂಗಡಿ: ಬುರುಡೆ ಪ್ರಕರಣದ ತನಿಖೆ ನಡೆಯುತ್ತಿರುವ ವೇಳೆ ಸೌಜನ್ಯ ಮಾವ ವಿಠಲಗೌಡ ಮಾಧ್ಯಮಗಳಲ್ಲಿ ಮಾಟಮಂತ್ರ, ಅಷ್ಟು ಇಷ್ಟು ಬುರುಡೆಗಳಿದ್ದವೆ ಅಂತ ನೀಡಿರುವ ಹೇಳಿಕೆ ಎಸ್. ಐ. ಟಿ ತನಿಖೆಯ ದಿಕ್ಕು ತಪ್ಪಿಸುವಂತಿದೆ ಎಂದು ಧರ್ಮಸ್ಥಳ ಗ್ರಾಮಸ್ಥ ಸಂದೀಪ್ ರೈ ಎಸ್. ಐ. ಟಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆತನ ಹೇಳಿಕೆ ಬಗ್ಗೆ ಕೂಡಲೇ ಎಸ್.ಐ.ಟಿ ಅಧಿಕಾರಿಗಳು ವಿಠಲಗೌಡನ ಬಂಧಿಸಿ ತನಿಖೆ ನಡೆಸಬೇಕೆಂದು ದೂರಿನಲ್ಲಿ ವಿನಂತಿಸಿದ್ದಾರೆ. ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಅಂತ ಅಧಿಕಾರಿಗಳು ತಿಳಿಸಿದ್ದಾರೆಂದು ದೂರುದಾರ ತಿಳಿಸಿದ್ದಾರೆ.