ಉಜಿರೆ: ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಶಶಿಕಲಾ ಡಿ. ಅಧ್ಯಕ್ಷತೆಯಲ್ಲಿ ಸೆ.16ರಂದು ಶಾರದಾ ಮಟಂಪ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷೆ ಶಶಿಕಲಾ ಡಿ. ಮಾತನಾಡಿ ಅಧಿಕಾರ ಖಂಡಿತ ಅಲ್ಲ ಜವಾಬ್ದಾರಿ ಮತ್ತು ಕರ್ತವ್ಯ ಮುಖ್ಯ ಎಂದು ಹೇಳಿದರು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ಪ್ರಮೀಳಾ, ಮೋಹಿನಿ ಪಿ.ವಿ., ಧನಲಕ್ಷ್ಮೀ, ಯಶೋಧ ಬಿ., ವಿಮಲಾ. ನಳಿನಿ, ಮಂಜುಳಾ, ವನಿತಾ, ಸುಜಾತ, ಗುಲಾಬಿ, ಜಯಲಕ್ಷ್ಮಿ ಉಪಸ್ಥಿತರಿದ್ದರು.
ಅಧ್ಯಕ್ಷೆ ಶಶಿಕಲಾ ಸ್ವಾಗತಿಸಿ, ನಿರ್ದೇಶಕಿ ಧನಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಪುಷ್ಪವತಿ ಧನ್ಯವಾದವಿತ್ತರು.