ರಾಷ್ಟ್ರೀಯ ಪೌಷ್ಠಿಕಾಂಶ ಸಪ್ತಾಯ ಪ್ರಯುಕ್ತ ಆಹಾರ ಮತ್ತು ಪೌಷ್ಠಿಕತೆಯ ಬಗ್ಗೆ ಸಾಧಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ

0

ಉಜಿರೆ: ರಾಷ್ಟ್ರೀಯ ಪೌಷ್ಠಿಕಾಂಶ ಸಪ್ತಾಯ ಪ್ರಯುಕ್ತ ಶಾಂತಿವನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಸೆ.15ರಂದು ಆಹಾರ ಮತ್ತು ಪೌಷ್ಠಿಕತೆಯ ಬಗ್ಗೆ ಸಾಧಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಆಳ್ವಾಸ್ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಆಹಾರ ಮತ್ತು ಪೋಷಣಾ ವಿಭಾಗದ ಮುಖ್ಯಸ್ಥ ಡಾ. ಅರ್ಚನಾ ಪ್ರಭಾತ್ ಅವರು ಸಾಧಕರಿಗೆ ಆಹಾರದ ಮಹತ್ವ ಮತ್ತು ಸಮಯ ಪಾಲನೆಯನ್ನು ನವ ಸಂಶೋಧನೆಗಳ ಉದಾಹರಣೆಯೊಂದಿಗೆ ತಿಳಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಳಡಿತ್ತಾಯ ಅವರು ವಹಿಸಿ ಉಪವಾಸದ ಮಹತ್ವವನ್ನು ಪಸರಿಸಿದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿಗಳು ಹಾಗೂ ಯೋಗ ವಿಭಾಗದ ಡೀನ್ ಡಾ॥ ಶಿವಪ್ರಸಾದ್‌ ಶೆಟ್ಟಿ ಮತ್ತು ಶ್ರೀ ಧ. ಪ್ರ. ಚಿ. ಮಹಾವಿದ್ಯಾಲಯದ ಉಪಪ್ರಾಂಶುಪಾಲ ಹಾಗೂ ಪ್ರಕೃತಿ ಚಿಕಿತ್ಸಾ ವಿಭಾಗದ ಡೀನ್ ಡಾ. ಸುಜಾತ ಅವರು ಎಲ್ಲಾ ಉಪಸ್ಥಿತರನ್ನು ಉದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ಡಾ. ಶಶಿಕಾಂತ್ ಜೈನ್ ನಿರ್ದೇಶಕರು, ವೈದ್ಯಾಧಿಕಾರಿಗಳು, ಸ್ನಾತಕೋತ್ತರ ವೈದ್ಯರು, ಕಲಿಕಾ ವೈದ್ಯರು, 200ಕ್ಕೂ ಹೆಚ್ಚು ಸಾಧಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಭೆಯಲ್ಲಿ ನೆರೆದಿದ್ದ ಎಲ್ಲರನ್ನು ಪೌಷ್ಟಿಕಾಂಶ ವಿಭಾಗದ ಡೀನ್ ಡಾ. ಗೀತಾ ಬಿ. ಶೆಟ್ಟಿ ಅವರು ಸ್ವಾಗತಿಸಿದರು. ಹಾಗೂ ಸ್ಥಾನಿಕ ವೈದ್ಯಾಧಿಕಾರಿಗಳಾದ ಡಾ. ಬಿಂದು ಅವರು ವಂದಿಸಿದರು.

LEAVE A REPLY

Please enter your comment!
Please enter your name here