ಅಂಡಿಂಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆಯುತ್ತಿರುವ ಅಂಡಿಂಜೆ ಶಿವನಿಧಿ ಸ್ವಸಹಾಯ ಸಂಘದ 25 ವರ್ಷದ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ
ನಡೆಯಿತು.
14 ಜನ ಸದಸ್ಯರು ಇರುವ ಈ ಸ್ವಸಹಾಯ ಸಂಘದ. ಹಿರಿಯ ಸದಸ್ಯೆ ಅಪ್ಪಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊರಗಜ್ಜ ದೇವಸ್ಥಾನದ ಧರ್ಮದರ್ಶಿ ಹರೀಶ್ ಅಧ್ಯಕ್ಷರು ವಹಿಸಿಕೊಂಡಿದ್ದರು.
ಪಂಚಾಯತ್ ಸದಸ್ಯ ಸುರೇಶ್ ಒಕ್ಕೂಟದ ಪದಾಧಿಕಾರಿ ಆನಂದ ಪೂಜಾರಿ, ಗೀತಾ, ವಲಯ ಮೇಲ್ವಿಚಾರಕಿ ಶಾಲಿನಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಸೇವಾ ಪ್ರತಿನಿಧಿ ಸುಹಾಸಿನಿ ಸ್ವಾಗತಿಸಿದರು. ಒಕ್ಕೂಟದ ಅಧ್ಯಕ್ಷೆ ಸುಲೋಚನ ವಂದಿಸಿದರು.