


ಕಕ್ಕಿಂಜೆ: ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಸಂಘ ಕೆಕ್ಕಿಂಜೆ ಶಾಖೆಯಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಶಾಖೆಯ ವ್ಯವಸ್ಥಾಪಕ ವಿವೇಕ್ ಸಂಪತ್ ಅರಿಗ ವಹಿಸಿದ್ದರು.



ಮುಖ್ಯ ಅತಿಥಿಗಳಾಗಿ ನವೋದಯ ಸ್ವ ಸಹಾಯ ಗುಂಪುಗಳ ಜಿಲ್ಲಾ ಮೇಲ್ವಿಚಾರಕ ರಂಜಿತ್ ಕುಮಾರ್, ತಾಲೂಕು ಮೇಲ್ವಿಚಾರಕ ಸ್ಟಾನಿ ಪಿಂಟೊ, ಉಮೇಶ್ ಆಚಾರ್ಯ, ಗ್ರಾಹಕರು ಉಪಸ್ಥಿತರಿದ್ದರು. ಸಿಬ್ಬಂದಿಗಳು ಸಹಕರಿಸಿದರು. ಸಿಬ್ಬಂದಿ ದುಗ್ಗಪ್ಪ ಗೌಡ ಕಾರ್ಯಕ್ರಮ ನಿರೂಪಿಸಿ, ತುಕಾರಾಮ ವಂದಿಸಿದರು.









