ವೇಣೂರು: ಸ. ಪ್ರೌ. ಶಾಲಾ ಭೌತಿಕ ಸೌಲಭ್ಯಕ್ಕೆ ಸಿದ್ದಕಟ್ಟೆ ರೋಟರಿ ಕ್ಲಬ್ ನಿಂದ ಆರ್ಥಿಕ ನೆರವು

0

ವೇಣೂರು: ಸರಕಾರಿ ಪ್ರೌಢಶಾಲೆಯಲ್ಲಿ ಕಳೆದ ವರ್ಷ ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಹಿರಿಯ ವಿದ್ಯಾರ್ಥಿಗಳ ಊರ ಪರ ಊರ ದಾನಿಗಳ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿದೆ. ಶೈಕ್ಷಣಿಕ ಸಾಧನೆಯಲ್ಲಿ ರಾಜ್ಯದಲ್ಲಿಯೇ ಅಗ್ರಸ್ಥಾನದಲ್ಲಿದೆ. ಇದನ್ನು ಮನಗಂಡ ಸಿದ್ದಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅವರು ರೂ. 50,000 ದೇಣಿಗೆಯನ್ನು ನೀಡಿ ಸಹಕರಿಸಿರುತ್ತಾರೆ.

ರೋಟರಿ ಕ್ಲಬ್ ಇದರ ಅಧ್ಯಕ್ಷ ರೋ. ದುರ್ಗಾದಾಸ್ ಶೆಟ್ಟಿ ಚೆಕ್ಕನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೇಶ್ ಪೂಜಾರಿ ಮೂಡುಕೋಡಿ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಭಾಸ್ಕರ್ ಪೈ ವೇಣೂರು, ಶಾಲಾ ಉಪ ಪ್ರಾಂಶುಪಾಲ ವೆಂಕಟೇಶ ಎಸ್. ತುಳುಪುಳೆ ಅವರಿಗೆ ಹಸ್ತಾಂತರಿಸಿದರು.

ಕ್ಲಬ್ ನ ಕೋಶಾಧಿಕಾರಿ ರೋ. ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು. ನೆರವು ಪಡೆಯಲು ಸಹಕರಿಸಿದ ಶಿಕ್ಷಕ ರವೀಂದ್ರ ಕೆ. ಅವರನ್ನು ಎಸ್.ಡಿ.ಎಮ್.ಸಿ ಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here