ಬಳಂಜ: ಬ್ರಹ್ಮಶ್ರೀ ಕುಣಿತ ಭಜನೆ ಮಂಡಳಿಯ 328ನೇ ಕಾರ್ಯಕ್ರಮ ಬೆಂಗಳೂರು, ಖ್ಯಾತಸಂದ್ರ 32ನೇ ವರ್ಷದ ಗಣೇಶೋತ್ಸವದ ಕಾರ್ಯಕ್ರಮದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಎಲ್ಲರ ಜನ ಮೆಚ್ಚುಗೆಗೆ ಪಡೆದುಕೊಂಡಿತ್ತು. ಬ್ರಹ್ಮಶ್ರೀ ಕುಣಿತ ಭಜನೆ ಮಂಡಳಿಯ ಗುರುಗಳು, ಮಾನ್ಯ ಹಾಗೂ ಭಜನೆ ಮಂಡಳಿಯ ಅಧ್ಯಕ್ಷೆ ಪ್ರಸಿದ್ದಿ ಶೆಟ್ಟಿ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ವಿಶೇಷವಾಗಿ ಗೌರವ ಧನ ಸಹಾಯ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.