ಉಜಿರೆ: ರಾಮನಗರ ಜಿಲ್ಲೆಯ ಮಾಗಡಿ ನಗರ “ನಮ್ಮ ಕರ್ನಾಟಕ ನವನಿರ್ಮಾಣ ವೇದಿಕೆ”ಯ ನೇತೃತ್ವದಲ್ಲಿ ನೂರು ವಾಹನಗಳಲ್ಲಿ 500 ಮಂದಿ ಧರ್ಮಸ್ಥಳಕ್ಕೆ ಬಂದು ಹೆಗ್ಗಡೆಯವರಿಗೆ ಗೌರವಾರ್ಪಣೆ ಮಾಡಿದರು.
ಧರ್ಮಸ್ಥಳದ ಬಗ್ಗೆ ಆದ ಅಪಪ್ರಚಾರ ಮತ್ತು ವದಂತಿಯನ್ನು ಖಂಡಿಸಿ, ಕ್ಷೇತ್ರದ ಪಾವಿತ್ರತೆಯ ರಕ್ಷಣೆಗೆ ತಾವೆಲ್ಲರೂ ಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಹೆಗ್ಗಡೆಯವರನ್ನು ಗೌರವಿಸಿ ಅವರ ಆಶೀರ್ವಾದ ಪಡೆದರು. ಬಳಿಕ ದೇವರದರ್ಶನ ಮಾಡಿ, ಪ್ರಸಾದ ಸ್ವೀಕರಿಸಿ, ಊರಿಗೆ ಮರಳಿದರು.