ಪದ್ಮುಂಜ: ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಅವರ ಅಧ್ಯಕ್ಷತೆಯಲ್ಲಿ ಸೆ. 11ರಂದು ಸಂಘದ ಸಭಾಂಗಣದಲ್ಲಿ ಜರಗಿತು.
ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಅವರು ಮಾತನಾಡಿ ಹೈನುಗಾರಿಕೆ ಮತ್ತು ಅದರಿಂದಾಗುವ ಲಾಭ ನಷ್ಟಗಳ ಬಗ್ಗೆ ವಿವರವಾಗಿ ತಿಳಿಸಿದರು. ಉಪಾಧ್ಯಕ್ಷ ಉಮೇಶ್ ಗೌಡ, ಸದಸ್ಯರಾದ ಸದಾಶಿವ ಶೆಟ್ಟಿ, ಶೀನಪ್ಪ ಗೌಡ, ರಾಜೇಶ್ ಎ., ಕರಿಯಪ್ಪ, ಪುರುಶೋತ್ತಮ ಗೌಡ, ಉಮೇಶ್ ಪೂಜಾರಿ, ರಮಾನಂದ ಪೂಜಾರಿ ಎಂ., ಶಾರದ ಆರ್ ಗೌಡ, ಪ್ರತಿಮಾ, ಕ್ರಷ್ಣ ನಾಯ್ಕ, ಸುನಿಲ್ ಕುಮಾರ್, ರಾಜೇಶ್ ಕಾಮತ್ ಪದನಿಮಿತ್ತ ಸದಸ್ಯರು ನಿವೃತ ಕಾರ್ಯದರ್ಶಿ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು.
ಹೇಮಾಲತಾ ಪಿ. ವರು 24/25 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಪದನಿಮಿತ್ತ ಸದಸ್ಯ ರಾಜೇಶ್ ಕಾಮತ್ ವಾರ್ಷಿಕ ಲೆಕ್ಕಪರಿಶೋಧನಾ ವರದಿಯನ್ನು ಓದಿ ಹೇಳಿದರು.
ಅಧ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿ ಚಾಲ್ತಿ ವರ್ಷದಲ್ಲಿ 9,59,119 ಲೀಟರ್ ಹಾಲು ಸಂಗ್ರಹಿಸಿ ಒಟ್ಟು 17,06,24,590.23ಪೈಸೆ ವ್ಯವಹಾರ ನಡೆಸಿದ್ದು 14,36,847.51ಪೈಸೆ ನಿವ್ವಳ ಲಾಭ ಪಡೆದಿರುತ್ತದೆ ಎಂದರು.
ಅತೀ ಹೆಚ್ಚು ಹಾಲು ಹಾಕಿದ ರೈತರಿಗೆ ಪ್ರೋತ್ಸಾಹಕ ಬಹುಮಾನ ಹಾಗೂ ಬೋನಸ್ ವಿತರಣೆ ನೀಡಲಾಯಿತು. ಅದೇ ರೀತಿ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಸಿಬ್ಬಂದಿಗಳಾದ ಅಮಿತ್, ಗುರುಪ್ರಸಾದ್, ರಿಜೇಶ್ ಕುಮಾರ್ ಸಹಕರಿಸಿದರು. ಗುಮಾಸ್ತೆ ಹೇಮಾಲತಾ ಪಿ. ಪ್ರಾರ್ಥನೆ ನಡೆಸಿದರು. ಪ್ರಭಾರ ಕಾರ್ಯದರ್ಶಿ ಸತೀಶ್ ಶೆಟ್ಟಿ ಅವರು ಸಭೆಯ ನೋಟೀಸ್ ಓದಿ ದಾಖಲಿಸಿದರು. ಸದಸ್ಯ ರಮಾನಂದ ಪೂಜಾರಿ ಎಂ. ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.
ವರದಿ: ಕಾಸಿಂ ಪದ್ಮುಂಜ.