ಕಾರ್ಮಿಕನು ಕೂಲಿಗಾರನಲ್ಲ, ರಾಷ್ಟ್ರ ನಿರ್ಮಾಪಕ ವಿಶ್ವಕರ್ಮ ಜಯಂತಿಯೇ ನಿಜವಾದ ಕಾರ್ಮಿಕರ ದಿನಾಚರಣೆ

0

ಬೆಳ್ತಂಗಡಿ: ವಿಕಸಿತ ಭಾರತ ಎಂಬ ಕನಸು 2047ರೊಳಗೆ ನಿಜವಾಗಬೇಕಾದರೆ, ಶ್ರಮದ ಮಹತ್ವವನ್ನು ಅರಿತು ಕಾರ್ಮಿಕರ ಕೈಗೆ ಸಮಾನ ಗೌರವ ನೀಡುವ ಸಮಾಜವನ್ನು.. ನಿರ್ಮಿಸುವುದು ಅತ್ಯಂತ ಅವಶ್ಯ, ಏಕೆಂದರೆ, ಶ್ರಮವೇ ಸಮಾಜದ ಅಸ್ತಿತ್ವದ ಮೂಲ ಹಾಗೂ ರಾಷ್ಟ್ರದ ಜೀವಶಕ್ತಿ, ಕಟ್ಟಡ, ರಸ್ತೆ, ಸೇತುವೆ, ಕಾರ್ಖಾನೆ, ಹೊಲ, ಕಚೇರಿ ಎಲ್ಲದರ ಹಿಂದೆ ಕಾರ್ಮಿಕನ ಬೆವರು ಹನಿಯ ಶ್ರಮವಿದೆ. ರೈತನಿಲ್ಲದೆ ಹೊಟ್ಟೆ ತುಂಬುವುದಿಲ್ಲ. ಕಾರ್ಮಿಕರಿಲ್ಲದೆ ಕಾಯಕವಿಲ್ಲ. ಶ್ರಮ ಜೀವಿಗಳಾದ ಕಾರ್ಮಿಕರೂ ದೇಶ ಪ್ರಗತಿಯ ಜೀವಾಳ. ಮೇಸ್ತಿ ಇಲ್ಲದೆ ಮನೆ ಕಟ್ಟಲಾಗುವುದಿಲ್ಲ, ಚಾಲಕರಿಲ್ಲದೆ ಸಂಚಾರವೇ ನಿಲ್ಲುತ್ತದೆ. ಹೀಗಾಗಿ ಕಾರ್ಮಿಕನೇ ಸಮಾಜದ ಬೆನ್ನೆಲುಬು.

ಮೇ ದಿನದ ವೈಫಲ್ಯ, ವಿಶ್ವಕರ್ಮ ಜಯಂತಿಯ ಮಹತ್ವ : 1886ರಲ್ಲಿ ಅಮೆರಿಕಾದ ಚಿಕಾಗೋದಲ್ಲಿ ಹಗಲಿರುಳು ತಮ್ಮ ತಮ್ಮ ದೇಶಕ್ಕಾಗಿ ದುಡಿಯುವ ಕಾರ್ಮಿಕರು 8 ಗಂಟೆಗಳ ಕೆಲಸಕ್ಕಾಗಿ ತಮ್ಮ ಹಕ್ಕನ್ನು ಪ್ರತಿಪಾದಿಸಲು ಹೋರಾಟ ನಡೆಸಿದಾಗ ಭೀಕರ ಹಿಂಸಾಚಾರ, ಗುಂಡಿನ ದಾಳಿ, ಬಾಂಬ್ ಸ್ಫೋಟ ನಡೆಯಿತು. ಈ ಹೋರಾಟದಲ್ಲಿ ಅನೇಕ ಕಾರ್ಮಿಕರು ತಮ್ಮ ಪ್ರಾಣವನ್ನೇ ಒತ್ತೆಯಿಟ್ಟರು.

ಆದರೆ ಈ ಹೋರಾಟದಲ್ಲಿ ಯಾವುದೇ ಪ್ರತಿಫಲ ಸಿಗಲಿಲ್ಲ. ಈ ವೈಫಲ್ಯದ ನಂತರ ಕಮ್ಯುನಿಸ್ಟ್ ಚಿಂತನೆಗಳು “ಮೇ 1 ಕಾರ್ಮಿಕರ ದಿನ” ಎಂದು ಜಗತ್ತಿಗೆ ಪ್ರಚಾರ ಮಾಡಿತು. ಆದರೆ ಅಮೆರಿಕಾದಲ್ಲಿಯೇ ಇಂದಿಗೂ ಕಾರ್ಮಿಕರ ದಿನವನ್ನು ಸೆಪ್ಟೆಂಬರ್ ಮೊದಲ ಸೋಮವಾರವೇ ಆಚರಿಸುತ್ತಾರೆ. ಹೀಗಿರುವಾಗ ಭಾರತದಲ್ಲಿ ವೈಫಲ್ಯದ ನೆನಪನ್ನು ಹಬ್ಬವನ್ನಾಗಿ ಆಚರಿಸುವ ಅಗತ್ಯವಿಲ್ಲ. ನಮ್ಮ ಸಂಸ್ಕೃತಿಗೆ ತಕ್ಕಂತೆ, ಶ್ರಮದ ಆರಾಧಕರಾದ ವಿಶ್ವಕರ್ಮ ದೇವರ ಜಯಂತಿ ಸೆಪ್ಟೆಂಬರ್ 17 ಅನ್ನು ರಾಷ್ಟ್ರೀಯ ಕಾರ್ಮಿಕರ ದಿನ ಎಂದು ಭಾರತೀಯ ಮಜೂರು ಸಂಘ ಘೋಷಿಸಿದೆ.

ವಿಶ್ವಕರ್ಮ ದೇವರು ಶ್ರಮದ ಆಚಾರ್ಯ : ಪುರಾಣಗಳಲ್ಲಿ ವಿಶ್ವಕರ್ಮರನ್ನು “ವಿಶ್ವದ ಮೊದಲ ಶಿಲ್ಪಿ, ಕಾರ್ಮಿಕರ ಆಚಾರ್ಯ” ಎಂದು ಎಂದು ವರ್ಣಿಸಲಾಗಿದೆ. ವಿಶ್ವದ ದೈವಿಕ ವಾಸ್ತು ಶಿಲ್ಪಿ ಮತ್ತು ಋಗ್ರೇದದಲ್ಲಿ ದೈವಿಕ ಸೃಜನಶೀಲತೆಯ ವ್ಯಕ್ತಿತ್ವವೆಂದು ಪರಿ ಪರಿಗಣಿಸಲಾಗಿದೆ. ಕೃಷ್ಣನಿಗಾಗಿ ದ್ವಾರಕ ನಗರ, ಪಾಂಡವರಿಗಾಗಿ ಇಂದ್ರಪ್ರಸ್ತ, ದೇವರುಗಳಿಗೆ ಆಯುಧಗಳು. ಉದಾ: ವಿಷ್ಣುವಿನ ಸುದರ್ಶನ ಚಕ್ರ ಶಿವನ ತ್ರಿಶೂಲ, ಇಂದ್ರನ ವಜ್ರಾಯುಧ, ಪುಷ್ಪಕ ವಿಮಾನ, ಕಾರ್ತಿಕೇಯನ ಭರ್ಜಿ, ಯಂತ್ರಶಾಸ್ತ್ರ ಮತ್ತು ವಾಸ್ತುಶಿಲ್ಪದ ವಿಜ್ಞಾನವಾದ ಸ್ಥಾಪತ್ಯ ವೇದವನ್ನು ಸಹ ಬರೆದಿದ್ದಾನೆಂದು ಪರಿಗಣಿಸಲಾಗಿದೆ.

ಅವರ ಸಂದೇಶ ಸ್ಪಷ್ಟ ಕಾರ್ಮಿಕನು ಕೇವಲ ಕೂಲಿ ಮಾಡುವವನು ಅಲ್ಲ; ಅವನು ಸೃಜನಶೀಲನು, ಸಮಾಜದ ಶಕ್ತಿಯ ಮೂಲ. ಶ್ರಮದ ತಾತ್ವಿಕ ಅರ್ಥ. ಶ್ರಮ ಎಂದರೆ ಕೇವಲ ದೈಹಿಕ ಶಕ್ತಿ ಅಲ್ಲ. ಅದು ಸೃಷ್ಟಿ, ತ್ಯಾಗ ಮತ್ತು ಸಮರ್ಪಣೆ ಅಂತ ಅರ್ಥವನ್ನು ಕೊಡುತ್ತದೆ. ವಿಶ್ವಕರ್ಮರು ಸಮಾಜ ರಕ್ಷಣೆಗೆ ತ್ಯಾಗ ಮಾಡಿದಂತೆ, ಪ್ರತಿಯೊಬ್ಬ ಕಾರ್ಮಿಕನು ತನ್ನ ಶ್ರಮದ ಮೂಲಕ ಸಮಾಜವನ್ನು ಕಾಪಾಡುತ್ತಾನೆ.

ಒಮ್ಮೆ ರಾಜನೊಬ್ಬ ಅದ್ಭುತ ಮಂಟಪ ಕಟ್ಟಿಸಿದಾಗ ಜನರು ರಾಜನನ್ನು ಹೊಗಳಿದರು. ಆಗ ಒಬ್ಬ ವೃದ್ಧ ಕಾರ್ಮಿಕನು ಹೇಳಿದನು: “ಈ ಮಂಟಪದಲ್ಲಿ ನಮ್ಮ ಶ್ರಮ, ಕಣ್ಣೀರು, ಬೆವರು ಬೆರೆತಿದೆ. ನಿಜವಾಗಿ ಇದು ನಮ್ಮದೇ.” ಎಂದಾಗ ರಾಜನು ತಕ್ಷಣ “ಇದು ಶ್ರಮ ಮಂಟಪ, ಶ್ರಮವಿಲ್ಲದೆ ಏನೂ ಸಾಧ್ಯವಿಲ್ಲ. ಎಂದು ಘೋಷಿಸಿದನು. ಇದರಿಂದಲೇ ಸಮಾಜವನ್ನು ನಿರ್ಮಿಸುವ ನಿಜವಾದ ಶಕ್ತಿ ಕಾರ್ಮಿಕರ ಕೈಯಲ್ಲಿದೆ ಎಂಬ ಸಂದೇಶ ಸ್ಪಷ್ಟವಾಗುತ್ತದೆ.

ಕಾರ್ಮಿಕನು ಕೂಲಿಗಾರನಲ್ಲ ರಾಷ್ಟ್ರ ನಿರ್ಮಾಪಕ : 2047ರೊಳಗೆ “ವಿಕಸಿತ ಭಾರತ” ಎಂಬ ಕನಸು ನನಸಾಗಬೇಕಾದರೆ. ಕಾರ್ಮಿಕರಿಗೆ ತಕ್ಕ ಗೌರವ ನೀಡುವುದು ಮಾತ್ರವಲ್ಲ. ಅವರ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಶಾಲಾ-ಕಾಲೇಜು ಮಕ್ಕಳಿಗೆ ವೃತ್ತಿಪರ ಕೌಶಲ್ಯ ಕಲಿಸಬೇಕು. ಪ್ರಾಥಮಿಕ ಸಂತದ ಪಠ್ಯದಲ್ಲೇ ವೃತ್ತಿಪರ ಕೌಶಲ್ಯಗಳಿಗೆ ಸಂಒಂಧಪಟ್ಟ ಪಾಠಗಳನ್ನು ಅಳವಡಿಸಬೇಕು. ಇನರಿಂದ ಉತ್ತೇಜನಗೊಂಡ ಮಕ್ಕಳು ಮುಂದಿನ ವಿನ್ಯಾಭ್ಯಾಸದಲ್ಲಿ ಇಂತಹ ವಿಭಾಗಗಳನ್ನು ಆಯ್ಕೆ ಮಾಹಾಕೊಳ್ಳಲು ಸಾಧ್ಯ. ತಾಂತ್ರಿಕ ಶಿಕ್ಷಣದ ಮೂಲಕ , Skill India Atmanirbhar Bharat ಕನಸಿಗೆ ತಯಾರು ಮಾಡಬೇಕು. ಕಾರ್ಮಿಕನು ಕೇವಲ ವೇತನಕ್ಕಾಗಿ ದುಡಿಯುವವನು ಅಲ್ಲ. ರಾಷ್ಟ್ರದ ಆರ್ಥಿಕತೆಯ ನಿಜವಾದ ಚಾಲಕಶಕ್ತಿ ಎಂದು ಒಪ್ಪಿಕೊಳ್ಳಬೇಕು.

ಭಾರತೀಯ ಪರಂಪರೆ ಕೈಗಾರಿಕಾ ಕುಟುಂಬ ಪರಿಕಲ್ಪನೆ : ಪಾಶ್ಚಾತ್ಯ ಮಾದರಿಯ “ಯಜಮಾನ-ಸೇವಕ” ಸಂಬಂಧಕ್ಕಿಂತಲೂ ಶ್ರೇಷ್ಠವಾದದ್ದು ನಮ್ಮ ಭಾರತೀಯ ಸಂಸ್ಕೃತಿಯ “ಕೈಗಾರಿಕಾ ಕುಟುಂಬ” ತತ್ವ ಉದ್ಯಮಿಯೂ ಕಾರ್ಮಿಕರೂ ಒಂದೇ ಕುಟುಂಬದ ಅವಿಭಾಜ್ಯ ಅಂಗಗಳು. ಈ ಭಾವನೆ ಉಳಿದರೆ ಮಾತ್ರ ಕೈಗಾರಿಕಾ ಸಮತೋಲನ ಮತ್ತು ರಾಷ್ಟ್ರದ ಶಾಶ್ವತ ಪ್ರಗತಿ ಸಾಧ್ಯ. ಇದೇ ಭಾರತೀಯ ಮಜೂರು ಸಂಘದ ಸ್ಪಷ್ಟ ನಿಲುವು ಆಗಿದೆ. ದೇಶದ ಬೆನ್ನೆಲುಬು ರೈತರು ಹೇಗೂ ಹಾಗೆಯೇ ಕಾರ್ಮಿಕರು ಕೂಡಾ ದೇಶದ ಪ್ರಗತಿಯ ಹರಿಕಾರರು. ಯಾವುದೇ ಅಪೇಕ್ಷೆ ಇಲ್ಲದೆ ದೇಶದ ಆರ್ಥಿಕ ಪ್ರಗತಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಕಾರ್ಮಿಕರಿಗೆ ಮೇ.1 ವೈಫಲ್ಯದ ದಿನ ಕಾರ್ಮಿಕರ ದಿನ ಆಗಬಾರದು. ಅದರ ಬದಲಾಗಿ ನಿರಂತರ ಶ್ರಮದ ಮೂಲಕ ಸಾಧನೆ ಮಾಡುತ್ತಿರುವ ಶ್ರಮಜೀವಿ ಕಾರ್ಮಿಕರಿಗೆ ಸೆ.17 ವಿಶ್ವಕರ್ಮ ಜಯಂತಿ ನಿಜವಾದ ರಾಷ್ಟ್ರೀಯ ‘ಕಾರ್ಮಿಕರ ದಿನವಾಗಿದೆ.

ಹೀಗಾಗಿ, ಕಾರ್ಮಿಕರಿಗೆ ಸಮಾನ ಗೌರವ ನೀಡೋಣ. ನಾವು ಏಕತೆಯಿಂದ ಸಂಘಟನೆಯ ಬಲವರ್ಧನೆ ಮಾಡೋಣ. ವಿಕಸಿತ ಭಾರತದ ನಿರ್ಮಾಣಕ್ಕಾಗಿ ಶಿಸ್ತಿನಿಂದ, ತ್ಯಾಗದಿಂದ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳೋಣ.

LEAVE A REPLY

Please enter your comment!
Please enter your name here