ಮಚ್ಚಿನ: ಅನಂತೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆಯನ್ನು ಸೆ.9ರಂದು ಒಕ್ಕೂಟದ ಅಧ್ಯಕ್ಷೆ ವಿದ್ಯಾ ಎಂ.ಹೆಚ್. ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಮೊದಲಿಗೆ ಕೃಷಿ ಸಖಿ ವಿಜಯರವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯು ಎಂ.ಬಿ.ಕೆ. ನಿಶಾಲತಾ ಅವರ ನಿರೂಪಣೆಯೊಂದಿಗೆ ಮುಂದುವರೆಯಿತು.
ಒಕ್ಕೂಟದ ಅಧ್ಯಕ್ಷೆ ದೀಪ ಬೆಳಗುವುದರ ಮೂಲಕ ಈ ಸಭೆಗೆ ಚಾಲನೆಯನ್ನು ನೀಡಿದರು. ತಾಲೂಕಿನ BRPPRI ಶ್ರೀಕಲಾ VPRP ಯೋಜನೆ ಬಗ್ಗೆ ಮಾತನಾಡಿದರು. ಎಲ್.ಸಿ.ಆರ್.ಪಿ. ಶ್ವೇತಾ ವರದಿಯನ್ನು ಓದಿದರು. ಪಶು ಸಖಿ ಚೇತನ ಜಮಾ ಖರ್ಚಿನ ವರದಿಯನ್ನು ಮಂಡಿಸಿದರೆ, ಎಮ್.ಬಿ.ಕೆ. ನಿಶಾಲತಾ CA Audit ನ್ನು ಓದಿದರು.
ಸಭೆಗೆ ಬ್ಯಾಂಕ್ ಆಫ್ ಬರೋಡದ ಬ್ಯಾಂಕ್ ಮ್ಯಾನೇಜರ್ ಆಗಮಿಸಿ ಬ್ಯಾಂಕಿನಿಂದ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿದರು. ಒಕ್ಕೂಟದ ಆಗು ಹೋಗುಗಳ ಬಗ್ಗೆ ತಾಲೂಕು ವಲಯ ಮೇಲ್ವಿಚಾರಕಿ ವೀಣಾ ತಮ್ಮ ಪ್ರಾಸ್ತವಿಕ ಮಾತುಗಳಲ್ಲಿ ವಿವರಿಸಿದರು. ಪೋಷಣಾ ಅಭಿಯಾನ ಕಾರ್ಯಕ್ರಮದ ಬಗ್ಗೆ ಆರೋಗ್ಯ ಕೇಂದ್ರದ ಸಿ.ಎಚ್.ಒ. ನಿಶ್ಮಿತಾ ಪೋಷಣೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಒಕ್ಕೂಟದ ಅಧ್ಯಕ್ಷೆ ತಾನು ಈ ಒಕ್ಕೂಟದ ಅಧ್ಯಕ್ಷೆಯಾದ ಮೇಲೆ ಆದ ಕೆಲವು ಅನುಭವಗಳನ್ನು ಹಂಚಿಕೊಂಡರು. ಮಾದಕ ವ್ಯಸನದ ಬಗ್ಗೆ ಪ್ರತಿಜ್ಞೆ ಮಾಡಲಾಯಿತು. ಎಲ್.ಸಿ.ಆರ್.ಪಿ. ಶ್ವೇತಾ ಧನ್ಯವಾದ ಸಲ್ಲಿಸಿದರು.